ಜಯಂಟ್ ಮಾಮ

Author : ಕೆ.ವಿ. ಸುಬ್ಬಣ್ಣ

Pages 51

₹ 5.00




Year of Publication: 1984
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ತಾಲೂಕು ಸಾಗರ, ಜಿಲ್ಲೆ: ಶಿವಮೊಗ್ಗ -577401

Synopsys

ಕೆ.ವಿ.ಸುಬ್ಬಣ್ಣ ಅವರು ಬರೆದ ಮಕ್ಕಳ ನಾಟಕ-ಜಯಂಟ್ ಮಾಮ. ಆಸ್ಕರ್ ವೈಲ್ಡ್ ಅವರ ‘ದಿ. ಸೆಲ್ಪಿಷ್ ಜಯಂಟ್’’ ಶೀರ್ಷಿಕೆಯ ಕಾಲ್ಪನಿಕ ರಾಕ್ಷಸನ ಕಥೆಯನ್ನು ಪ್ರೇರಣೆಯಾಗಿರಿಸಿಕೊಂಡು ಬರೆದ ನಾಟಕ. ಮಕ್ಕಳ ಕಲ್ಪನಾಶಕ್ತಿ ಶ್ರೀಮಂತವಾದದ್ದು. ಇಂತಹ ಸೃಜನಶೀಲ ಕಾಲ್ಪನಿಕತೆಯನ್ನು ರಂಗಭೂಮಿಯಲ್ಲಿ ತರುವ ಉದ್ದೇಶ ನಾಟಕ ರಚನೆಯ ಹಿಂದಿದೆ. ಕಾಲ್ಪನಿಕತೆ ಎಂದರೆ ವಾಸ್ತವದಿಂದ ಹಿಂದೆ ಸರಿಯುವುದಲ್ಲ. ವಾಸ್ತವಿಕತೆಯಲ್ಲೇ ಕಲ್ಪನೆಗಳನ್ನು ಹೇಗೆ ದುಡಿಸಿಕೊಳ್ಳಬಹುದು ಎಂಬುದಕ್ಕೆ ಈ ನಾಟಕ ಉತ್ತಮ ಮಾದರಿ. ರಾಕ್ಷಸ, ಹನುಮನಾಯಕ, ಚೀಫ್ ಎಂಜಿನಿಯರ್, ಮುದುಕ ಮೇಸ್ಟ್ರು, ಸಿಸ್ಟರ್ ಹಾಗೂ ಪೊಲೀಸರು ಹೀಗೆ ಒಟ್ಟು ಆರು ಪಾತ್ರಗಳ ಮೂಲಕ ಮಕ್ಕಳ ಕಾಲ್ಪನಿಕತೆಯ ಸಿರಿವಂತಿಕೆಯನ್ನು ಹಾಗೂ ವಾಸ್ತವಿಕತೆಯನ್ನು ಎದುರಿಸುವ ಕಲಾತ್ಮಕತೆಯ ಸಂದೇಶ ಈ ನಾಟಕ ನೀಡುತ್ತದೆ.

 

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books