ಭಾರತದ ಸಮಾಜ ಮತ್ತು ಮತ ಸುಧಾರಕರು

Author : ಎಚ್‌. ಪರಮೇಶ್ವರ

Pages 152

₹ 225.00




Year of Publication: 2022
Published by: ಚಿರಂತ್ ಪ್ರಕಾಶನ
Phone: +918660966208

Synopsys

ಲೇಖಕರಾದ ಡಾ. ಎ. ಸಿ. ನಾಗೇಶ ಹಾಗೂ ಎಚ್. ಪರಮೇಶ್ವರ ಅವರು ಬರೆದಿರುವ ಐತಿಹಾಸಿಕ ವಿಶ್ಲೇಷಣಾ ಕೃತಿ ಭಾರತದ ಸಮಾಜ ಮತ್ತು ಮತ ಸುಧಾರಕರು . ಕೃತಿಯ ಬೆನ್ನುಡಿಯಲ್ಲಿ ಡಾ . ಜಿ . ರಾಮಕೃಷ್ಣ ಅವರು ಬರೆದಿರುವಂತೆ, ಚರಿತ್ರೆಯ ನಿರ್ಮಾಪಕರು ಆಯಾ ಕಾಲಘಟ್ಟಗಳ ಜನತಾ ಸಮೂಹದೇ ಆದ್ದರಿಂದ ಯಾವುದೋ ಒಬ್ಬ ಧೀರೋದಾತ್ತ ವ್ಯಕ್ತಿ ಇಡೀ ಇತಿಹಾಸಕ್ಕೆ ತಿರುವು ನೀಡಬಹುದೆಂಬ ಮಿಥೈಯನ್ನು ಮರಸ್ಕರಿಸುವಂತಿಲ್ಲ . ಆದಾಗ್ಯೂ ತಮ್ಮ ಚಿಂತನೆ ಮತ್ತು ಕ್ರಿಯೆಗಳಿಂದ ಅನೇಕ ಮಹಾನ್ ವ್ಯಕ್ತಿಗಳು ಸಮುದಾಯದ ಆಶೋತ್ತರಗಳನ್ನು ಪ್ರತಿಫಲಿಸಿರುವುದುಂಟು . ಅಂತಹ ವ್ಯಕ್ತಿಗಳು ಯಾವುದೇ ಒಂದು ಕ್ಷೇತ್ರಕ್ಕೆ ಮತ್ತು ಕಾಲಮಾನಕ್ಕೆ ಸೀಮಿತವಾಗಿರುವುದಿಲ್ಲ . ಮತಧರ್ಮ , ರಾಜಕೀಯ ಜೀವನ , ತತ್ತ್ವಶಾಸ್ತ್ರ , ಸಾಮಾಜಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಈ ಚಾರಿತ್ರಿಕ ವ್ಯಕ್ತಿಗಳು ಪುರಾಣಪುರುಷರಲ್ಲ , ರಂಜನೀಯ ಮಾತುಗಳನ್ನಾಡುವಂಥವರಲ್ಲ . ಆದರೆ ಉಪಯುಕ್ತ ವೈಚಾರಿಕ ಚಿಂತನೆ ನಡೆಸಿದವರಾಗಿರುತ್ತಾರೆ . ತನ್ಮೂಲಕ ಚರಿತ್ರೆಯಲ್ಲಿ ಶೋಭಿಸಿರುವ ಎಷ್ಟೋ ಚಳವಳಿಗೆ ಅಂಥವರು ಆದ್ಯ ಪ್ರವರ್ತಕರಾಗಿರುವುದೂ ಉಂಟು . ಒಂದರ್ಥದಲ್ಲಿ ಅವರು ಇತಿಹಾಸದ ಪಥಕ್ಕೆ ನಿರ್ದಿಷ್ಟ ದಿಕ್ಕುಗಳನ್ನು ನಿರ್ಮಿಸುವವರಾಗಿರುತ್ತಾರೆ . ವಿಶ್ವದ ಮನುಕುಲದ ಇತಿಹಾಸದಲ್ಲಿ ಅವರಿಗೆ ಪ್ರಶಸ್ತ ಸ್ಥಾನಗಳು ದೊರೆತಿರುವುದು ಅವರ ಮತಿಯಿಂದ , ಆಳವಾದ ದಾರ್ಶನಿಕ ದೃಷ್ಟಿಯಿಂದ ಮತ್ತು ಚೇತೋಹಾರಿ ಪ್ರಗಲ್ಯ ಕಾರ್ಯನಿರ್ವಹಣೆಯಿಂದ , ಮಾನವ ಸಮಾಜದ ಮೌಲಿಕ ಏಳಿಗೆಗೆ ಅಂಥವರ ಕೊಡುಗೆಯು ಅವಿಸ್ಮರಣೀಯ . ಅಂಥವರು ತಮ್ಮ ಅಸಾಧಾರಣ ಪ್ರತಿಭಾನ್ವಿತ ಹೆಗ್ಗಳಿಕೆಯನ್ನು ಎಲ್ಲೋ ಗುಹೆಯಲ್ಲಿ ಕೂತು ಸಂಪಾದಿಸಿದ್ದಲ್ಲ . ಜನರ ನಡುವಿನಿಂದಲೇ ಬಂದ ಈ ಜನ ಅಸಾಮಾನ್ಯರಾಗಿ ನಡೆದುಕೊಂಡಿದ್ದಾರೆ ಎಂದಿದ್ದಾರೆ.

About the Author

ಎಚ್‌. ಪರಮೇಶ್ವರ

ಎಚ್‌. ಪರಮೇಶ್ವರ ರವರು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು, ದೋಬೈಲು ಗ್ರಾಮ, ನೇರಲಸರದಲ್ಲಿ ಜನಿಸಿದರು. ತಂದೆ ಹೊನ್ನನಾಯ್ಕ, ತಾಯಿ ದೇವಮ್ಮ, ದೋಬೈಲು, ಹೊಸನಗರ ಶಾಲೆಗಳಲ್ಲಿ ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದರು. ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಹೊಸನಗರದಲ್ಲಿ ವ್ಯಾಸಂಗ ಮುಂದುವರಿಸಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ಪೂರೈಸಿ, ಎಂ.ಎ, ಪದವಿ ಪಡೆದರು, ಡಾ. ಎ. ಸಿ. ನಾಗೇಶರವರ ಆತ್ಮೀಯ ವಿದ್ಯಾರ್ಥಿಯಾಗಿದ್ದು, ಅವರ ಮಾರ್ಗದರ್ಶನದಂತೆ ಚರಿತ್ರೆ ಉಳುಮೆಯಲ್ಲಿ ತೊಡಗಿರುವರು. ಚರಿತ್ರೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಮತ್ತು ...

READ MORE

Related Books