ಆಧುನಿಕ ಭಾರತದ ಇತಿಹಾಸ

Author : ಸದಾಶಿವ ಕೆ.

Pages 476

₹ 333.00




Year of Publication: 2018
Published by: ಪ್ರಿಯದರ್ಶಿನಿ ಪ್ರಕಾಶನ
Address: ಮೈಸೂರು

Synopsys

ಆದುನಿಕ ಭಾರತದ ಇತಿಹಾಸಕ್ಕೆ ಸಂಬಂಧಿಸಿ ಲೇಖಕ ಡಾ. ಕೆ. ಸದಾಶಿವ ಅವರು ಬರೆದ ಕೃತಿ ಇದು. ಪ್ರಾಚೀನ ಭಾರತದ ಇತಿಹಾಸ ಶ್ರೀಮಂತವಾಗಿದ್ದು, ಸಂಶೋಧನೆ ನಡೆಸಿದಷ್ಟು ಹೆಚ್ಚು ಹೆಚ್ಚು ವಿಷಯಗಳು ಗೋಚರವಾಗುತ್ತಿದೆ. ಆದರೆ, ಆಧುನಿಕ ಭಾರತವು ಸಹ ತನ್ನ ಒಡಲೊಳಗೆ ಅಧ್ಯಯನದ ಶಿಸ್ತಿಗೆ ಒಳಪಡುವ ಅಸಂಖ್ಯ ದಾಖಲೆ-ಪುರಾವೆಗಳನ್ನು ಹೊಂದಿದೆ. ಇವುಗಳ ಶಿಸ್ತೀಯ ಅಧ್ಯಯನ ಅಗತ್ಯದ ಭಾಗವಾಗಿ ಈ ಕೃತಿಯು ಮಹತ್ವದ ಸುಳಿವು-ಮಾಹಿತಿ ನೀಡುತ್ತದೆ. ವಿಶೇಷವಾಗಿ ಭಾರತಕ್ಕೆ ಬ್ರಿಟಿಷರ ಕೊಡುಗೆಗಳು, ಸ್ವಾತಂತ್ಯ್ರಾನಂತರದ ಭಾರತದ ಅಭಿವೃದ್ಧಿಯ ಇತಿಹಾಸವೂ ಈ ಕೃತಿ ಒಳಗೊಂಡಿದೆ.

About the Author

ಸದಾಶಿವ ಕೆ.

ಡಾ. ಕೆ. ಸದಾಶಿವ ಅವರು ಮೈಸೂರು ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥರು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿ.ವಿ.ಯಿಂದ ಹಾಗೂ  ಮೈಸೂರು ರಾಜ್ಯದಲ್ಲಿ ಸಾಮಾಜಿಕ ಶಾಸನ (1881-1947) - ಈ ವಿಷಯವಾಗಿ ಪಿಎಚ್ ಡಿ  ಪದವೀಧರರು. ಆಧುನಿಕ ಮೈಸೂರು ಇತಿಹಾಸ ಹಾಗೂ ಕರ್ನಾಟಕ ದಲಿತರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ವಿಶೇಷ ಅಧ್ಯಯನಾಸಕ್ತರು.  ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಸೌತ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ದಿ. ಮಿಥಿಕ್ ಸೊಸೈಟಿ ಸಂಸ್ಥೆಯ ಸದಸ್ಯರು, ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಕರ್ನಾಟಕ ಇತಿಹಾಸ ಅಕಾಡೆಮಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಅಜೀವ ಸದಸ್ಯರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ...

READ MORE

Related Books