‘ಜುಟ್ಟಕ್ಕಿ’ ಲೇಖಕ ಹ.ಸ. ಬ್ಯಾಕೋಡ ಅವರು ರಚಿಸಿರುವ ಮಕ್ಕಳ ಕಾದಂಬರಿ. ಈ ಕೃತಿಗೆ ಹಿರಿಯ ಸಾಹಿತಿ ವೈದೇಹಿ ಹಾಗೂ ಪ್ರೊ.ಎಚ್.ಜಿ. ಸಿದ್ಧರಾಮಯ್ಯ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಕಥನ ಮಾರ್ಗದ ಮೂಲಕವೇ ಮಕ್ಕಳಲ್ಲಿ ಮಮತೆ ಮಮಕಾರ ಕಾರುಣ್ಯದ ಒರತೆ ಚಿಮ್ಮಿಸುವ ಜೀವಪ್ರೀತಿ ಉದ್ಬವಿಸುವಂತೆ ಮಾಡುವ ಬ್ಯಾಕೋಡ ಅವರ ಪ್ರಯತ್ನ ಸಾರ್ಥಕವೇ ಸರಿ. ಬ್ಯಾಕೋಡ ಅವರು ಮಕ್ಕಳ ಕತೆಗಳನ್ನು ಇನ್ನಷ್ಟು ಬರೆಯುತ್ತಲೇ ಇದ್ದಾರೆ, ಅವು ಯಾವುವೂ ಬರಿಯ ಕಾಗೆ ಗುಬ್ಬಿಗಳ ರೋಚಕ ಕತೆಗಳಿಗೇ ಮುಗಿಯುವುದಿಲ್ಲ. ಬದಲು ಇವತ್ತಿನ ಪಾರಿಸರಿಕ ಸಮಸ್ಯೆಗಳ ಕಡೆಗೂ ಶೋಷಣೆ, ಶೋಷಕ ಮತ್ತು ಶೋಷಿತ ವರ್ಗದ ಕಡೆಗೂ ಅವುಗಳದೇ ರೀತಿಯಲ್ಲಿ ಗಮನ ಹರಿಸುತ್ತವೆ. ಅಂತಹ ಯಾವ ಶಬ್ದಗಳನ್ನೂ ಅಂತಂತೇ ಸೀದ ಬಳಸದೇನೇ ಒಟ್ಟು ಭಾವವನ್ನು ತಲುಪಿಸುವ ಆಶಯ ಇವುಗಳ ಚೌಕಟ್ಟಿನಲ್ಲಿ ಹಾಗೂ ಹಿನ್ನೆಲೆಯಲ್ಲಿ ಅಡಗಿದೆ. ಕತೆಗಳ ನೇಯ್ಗೆಯ ಕ್ರಮದಲ್ಲೇ ಆದಷ್ಟೂ ಸರಳವಾಗಿ ಹೇಳುತ್ತ ಮಕ್ಕಳ ಮನಸ್ಸನ್ನು ಸೆಳೆಯಬೇಕೆಂಬ ಅಭಿಲಾಷೆ ಇರುವುದು ಎದ್ದು ಕಾಣುತ್ತದೆ. ಇದಕ್ಕಾಗಿ ಅವರು ಅಭಿನಂದನೀಯರು ಎಂದು ವೈದೇವಿ ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.