ತೊಟ್ಟಿಲಗೊಂಬೆ 20ನೆಯ ಶತಮಾನದ ಮಕ್ಕಳ ಸಾಹಿತಿ ಮೇವುಂಡಿ ಮಲ್ಲಾರಿಯವರ ನೆನಪಿನಲ್ಲಿ 'ಮೇವುಂಡಿ ಮಲ್ಲಾರಿ ಮಕ್ಕಳ ಕಾದಂಬರಿ' ಸರಮಾಲೆಯನ್ನು 'ಅಭಿನವ' ಮತ್ತು 'ಸಂಧ್ಯಾ ಸಾಹಿತ್ಯ ವೇದಿಕೆ' ಒಟ್ಟಿಗೆ ಸೇರಿ ಪ್ರಕಟಿಸುತ್ತಿದ್ದು, ಈ ಮಾಲೆಯ ಆರನೆಯ ಕಾದಂಬರಿ ಮಾದುಪ್ರಸಾದ ಹುಣಸೂರು ಬರೆದಿರುವ 'ತೊಟ್ಟಿಲಗೊಂಬೆ'. ಮೇವುಂಡಿ ಮಲ್ಲಾರಿಯವರ ನೆನಪಿನಲ್ಲಿ ಇವರು ಒಂದರ ಹಿಂದೆ ಒಂದರಂತೆ ಮಕ್ಕಳ ಕಾದಂಬರಿಯನ್ನು ಪ್ರಕಟಿಸುತ್ತಿರುವ ಪರಿ ಅನನ್ಯವಾಗಿದೆ.
ಕನ್ನಡದಲ್ಲಿ ಮಕ್ಕಳಿಗೆ ಬೇಕಾಗುವ ಪಠ್ಯೇತರ ಪುಸ್ತಕಗಳು ತೀರ ಕಡಿಮೆ.ಅಂಗ್ಲ ಭಾಷೆಯಲ್ಲಿ ದಾರಳವಾಗಿ ಪಠ್ಯೇತರ ಪುಸ್ತಕಗಳಿವೆ.ಕನ್ನಡದಲ್ಲಿ ಈ ಬಗೆಯ ಬರಹಗಳ ಕೊರತೆಯನ್ನು ನೀಗಿಸಲು ಲೇಖಕರು ಪ್ರಯತ್ನಸಿದ್ದಾರೆ ನಮ್ಮ ಲೇಖಕರು ಹಳೆಯ ಮಾದರಿಯ ಜನಪದ ಕತೆಗಳು, ಪಂಚತಂತ್ರದ ಕತೆಗಳು, ನೀತಿ ಕತೆಗಳ ಮಾದರಿಯಲ್ಲೇ ತಮ್ಮ ಸಾಹಿತ್ಯವನ್ನು ರಚಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ಈ ಕತೆಗಳನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ ಎನ್ನುವಂತಾಗಿದೆ.ಇದಕ್ಕೆ ವಿಭಿನ್ನವಾಗಿ ಲೇಖಕರು ಮಕ್ಕಳಲ್ಲಿ ಆಸಕ್ತಯನ್ನು ಹೆಚ್ಚಿಸುವ ಪುಸ್ತಕ ರಚನೆಗೆ ಒತ್ತು ನೀಡಿದ್ದಾರೆ.
©2024 Book Brahma Private Limited.