"ಮತ್ತೆ ಹೊಸ ಗೆಳೆಯರು" ಮಕ್ಕಳ ಕಥಾಬರಹಗಾರ ವೈ,ಜಿ,ಭಗವತಿ ಅವರು ಮಕ್ಕಳಿಗಾಗಿ ರಚಿತವಾದ ಕಾದಂಬರಿಯಾಗಿದೆ. ಖ್ಯಾತ ಕಥೆಗಾರ್ತಿ ಸುನಂದಾ ಕಡಮೆ ಅವರು ಮುನ್ನುಡಿ ಬರೆದು ‘ಈ ಕೃತಿಯು ಮಕ್ಕಳ ಮನೊಲೋಕದ ಹಲವಾರು ಭಾವಗಳ ಸಂಗಮ ಇಲ್ಲಿದೆ. ಅನಿಲ ಎಂಬ ಬಾಲಕನದ್ದು ಮುಖ್ಯಪಾತ್ರ. ಶಾಲೆಯ ಅಂಗಳದಲ್ಲಿ ಜರಗುವ ಮಕ್ಕಳ ತುಂಟಾಟ, ಸ್ಪರ್ಧೆ, ಸಹಕಾರ, ವೈರತ್ವ, ಹೊಂದಾಣಿಕೆ ಇವೆಲ್ಲ ಭಾವನೆಗಳ ಜಗತ್ತು ಅನಾವರಣಗೊಂಡಿದೆ. ಇಡೀ ಕಾದಂಬರಿಯಲ್ಲಿ ಅವ್ವ ಮಕ್ಕಳ ಬೆಳವಣಿಗಾಗಿ ಹೇಗೆಲ್ಲಾ ಶ್ರಮಿಸುತ್ತಾಳೆ. ಎನ್ನುವ ಅವ್ವನ ಅಸ್ಮಿತೆಯನ್ನು ಕಾಣಬಹುದು. ಹಿರಿಯರಿಗೆ ತಮ್ಮ ಬಾಲ್ಯ ನೆನಪಿಸುವ, ಮಕ್ಕಳಿಗೆ ಅನೇಕ ಸಂಗತಿಗಳು ಕುತೂಹಲ ಮೂಡಿಸುವಲ್ಲಿ ಕಾದಂಬರಿ ಓದುಗನನ್ನು ಗೆಲ್ಲುತ್ತದೆ. ಅಜ್ಜನ ಊರಿನ ಹಳ್ಳಿಯ ಸೊಗಡು, ಊರಿನ ಸ್ಥಳಿಯ ಐತಿಹಾಸಿಕ ಹಿನ್ನಲೆ ಇವೆಲ್ಲ ಸಂಗತಿಯೊಂದಿಗೆ ಈ ಕಾದಂಬರಿಯ ವಿಷಯವಸ್ತು ಒಂದಿಷ್ಟು ಹೊಸತು ಎನಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.
"ನೈರುತ್ಯ" ಕನ್ನಡದ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದು, ಸಂಪಾದಕ ಡಾ. ಅರುಣ ಹೊಸಗೊಪ್ಪ ಆಶಯ ನುಡಿ ಬರೆದಿದ್ದಾರೆ. ಹೊಸತನದ ಅಂಶಗಳೊಂದಿಗೆ ಮಂಜಣ್ಣ ನಾಯಕ ಅವರು ಬರೆದ ಚಿತ್ರಗಳು, ಮುಖಪುಟವು ಕಾದಂಬರಿಯ ಆಕರ್ಷಣೆಯಾಗಿದೆ.
©2025 Book Brahma Private Limited.