ನೆಲ - ಜಲ - ವಾಯು ಸಾಹಸ ಕ್ರೀಡೆಗಳ ಪರಿಚಯ, ಕಾಡು - ಮೇಡು - ಬೆಟ್ಟ - ಗುಡ್ಡಗಳಲ್ಲಿ ಅಲೆದಾಟ, ಶಾಲೆ - ಲೈಬ್ರರಿ - ಅಡ್ವೆಂಚರ್ ಕ್ಲಬ್ - ಹಾಬಿ ಕ್ಲಬ್ ಗಳಲ್ಲಿ ಅನೌಪಚಾರಿಕ ಕಲಿಕೆ, ನೆಲ ಜಲ - ವಿಜ್ಞಾನ - ಪರಿಸರ - ಕಲೆ - ಸಾಹಿತ್ಯ - ಸಂಸ್ಕೃತಿಯ ಪರಿಚಯ ಹೀಗೆ ಹಲವು ವಿಷಯಗಳನ್ನು ಬಿಚ್ಚಿಡುವ ಕೃತಿ ಅಡ್ವೆಂಚರ್.
ಹದಿನಾಲ್ಕು - ಹದಿನೈದು ವರ್ಷಗಳ ಯುವ ಉತ್ಸಾಹಿಗಳು ನಡೆಸಿರುವ ಮತ್ತು ನಡೆಸಲು ಸಾಧ್ಯವೂ ಆಗಿರುವ ನೆಲ-ಜಲ-ವಾಯು-ಹಿಮ ಸಾಹಸ ಚಟುವಟಿಕೆಗಳ ಪರಿಚಯ ಇಲ್ಲಿದೆ. ಜೊತೆಗೆ ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಿ ಯಶಸ್ಸು ಗಳಿಸಲು ಬೇಕಾಗುವ ವ್ಯಕ್ತಿತ್ವ ವಿಕಸನ ತರಬೇತಿಯ ಅವಶ್ಯಕತೆ, ಈಗಾಗಲೇ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದಾಗಿ ಜಗತ್ತಿನ ಮನ್ನಣೆ ಗಳಿಸಿರುವ ಜೋಸೆಫ್ ಪುಲಿಟ್ಜರ್, ಥಾಮಸ್ ಆಲ್ವಾ ಎಡಿಸನ್, ರಾಹುಲ ಸಾಂಕೃತ್ಯಾಯನ, ಸ್ವಾಮಿ ವಿವೇಕಾನಂದ, ಪುರಿಯ ಗೋವರ್ಧನ ಪೀಠದ ಶಂಕರಾಚಾರ್ಯರಾಗಿದ್ದರೂ ಶ್ರೇಷ್ಠ ಗಣ ತಜ್ಞರಾಗಿದ್ದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮೊದಲಾದ ಮಹಾನ್ ವ್ಯಕ್ತಿಗಳನ್ನು ಸಂದರ್ಭೋಚಿತವಾಗಿ ಪರಿಚಯ ಮಾಡಿಕೊಡಲಾಗಿದೆ.
ಕರ್ನಾಟಕದ ಪ್ರಮುಖ ಅರಣ್ಯಗಳಲ್ಲಿ, ಗಿರಿಶಿಖರಗಳಲ್ಲಿ, ಮುಖ್ಯವಾಗಿ ಕೊಡಚಾದ್ರಿ, ನರಸಿಂಹ ಪರ್ವತ, ಕುದುರೆಮುಖ, ಹೆಬ್ಬೆ ಜಲಪಾತ, ಅರಿಸಿನ ಗುಂಡಿ ಜಲಪಾತ, ಕಲ್ವರಂಗನ ಗಿರಿ, ಕಲ್ಲತ್ತಗಿರಿ ಮೊದಲಾದ ಗಿರಿಶಿಖರಗಳ ಪರಿಚಯ ಹಾಗೂ ಕೆಳದಿ ಮತ್ತು ಚಿತ್ರದುರ್ಗ ಪಾಳೇಪಟ್ಟುಗಳ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳಲ್ಲಿ ನಡೆಸಿದ ಸಾಹಸ ಚಟುವಟಿಕೆಗಳು, ಚಿತ್ರದುರ್ಗದ ಮತ್ತು ಕವಲೇ ದುರ್ಗದ ಕೋಟೆಗಳ ತುಲನಾತ್ಮಕ ಪರಿಚಯ ಇಲ್ಲಿದೆ. ಗ್ರಂಥಾಲಯ, ಕಂಪ್ಯೂಟರ್, ಕ್ವಿಜ್, ಭಾಷಾ ಆಟಗಳು, ಮೆನ್ಸಾ, ಶೈಕ್ಷಣ ಕ ಡೆಕಾಥ್ಲಾನ್ ಮುಂತಾದ ಹೊಸ ವಿಚಾರಗಳ ಪ್ರಸ್ತಾಪ ಈ ಕಾದಂಬರಿಯಲ್ಲಿದೆ.
©2025 Book Brahma Private Limited.