ನಮ್ಮೂರ ಜಾತ್ರೆ ವೆಂಕಟೇಶ ಕಲಕಂಭ ಅವರ ಮಕ್ಕಳ ಕಾದಂಬರಿಯಾಗಿದೆ. ಸಾಹಿತ್ಯ ಅಭಿರುಚಿ ಮತ್ತು ಸಾಹಿತ್ಯ ಕುರಿತಾದ ಚಿಂತನೆಗಳತ್ತ ಅವರ ಬಾಲ್ಯದ ನೆನಮ ಆ ಬಾಲ್ಯದ ಮಕ್ಕಳ ಮನೋಭಾವಕ್ಕೆ ಅವರು ಅಕ್ಷರ ರೂಪಕ್ಕೆ ಹಿಡಿದಿಟ್ಟು, ಅವರಲ್ಲನ ಗಾಢವಾದ ಜಾನಪದ ಸಂಸ್ಕೃತಿ ಮತ್ತು ಗ್ರಾಮ ಸಂಸ್ಕೃತಿ ಎರಡರ ಸಂಗಮವೇ "ನಮ್ಮೂರ ಜಾತ್ರೆ"ಯಲ್ಲಿ ಮಡುಗಟ್ಟದೆ. ಮುಗ್ಧ ಮಕ್ಕಳ ಆಶಯಕ್ಕೆ ತೆರೆದಿಟ್ಟುಕೊಂಡ ಕುತೂಹಲಕಾರಿ ಬೆಳವಣಿಗೆ ಕಾಣುತ್ತೇವೆ. ಎಂಬುದನ್ನು ಅನಾವರಣಗೊಂಡ ಕೃತಿ ಮಕ್ಕಳ ಕೈಗನ್ನಡಿ ಯಾಗಿದೆ. ಓದುವ ಪ್ರವೃತ್ತಿ ಕ್ಷೀಣಿಸುತ್ತಿರುವ ದಿನಗಳಲ್ಲ ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಅತ್ಯಂತ ಸರಳವಾಗಿ ಹಾಗೂ ಅಷ್ಟೇ ಸಮರ್ಥವಾಗಿ ಬರವಣಿಗೆಯ ಶೈಲಿಯನ್ನು ಬಳಸಿಕೊಂಡು ಅವರು ಬಾಲ್ಯದಲ್ಲಿ ಕಂಡುಂಡ ಅನುಭವಗಳನ್ನು ಮಕ್ಕಳ ಮಟ್ಟಕ್ಕೆ ವಿಶಿಷ್ಟವಾಗಿ ಕಟ್ಟಕೊಡಬಲ್ಲ ಉತ್ತಮ ಮಕ್ಕಳ ಕೃತಿ ನೀಡುವುದ ರೊಂದಿಗೆ ಮಕ್ಕಳಗೆ ಓದುವ ಸಂಸ್ಕೃತಿಯನ್ನು ಹೆಚ್ಚಿಸಿಕೊಳ್ಳುವಲ್ಲ ಮಹತ್ವದ ಕೃತಿಯಾಗಿದೆ.
©2024 Book Brahma Private Limited.