ಮೇವುಂಡಿ ಮಲ್ಲಾರಿ ಮಕ್ಕಳ ಕಾದಂಬರಿ ಸುಗ್ಗಿಯ ಸರಣಿಯಲ್ಲಿ ಹೊರಬಂದಿರುವ ಐದನೆಯ ಮಕ್ಕಳ ಕಾದಂಬರಿ ಇದು. ಹಳೆಯ ಮಾದರಿಯ ಜನಪದ ಕತೆಗಳು, ಪಂಚತಂತ್ರದ ಕತೆಗಳು, ನೀತಿಕತೆಗಳನ್ನು ಅನುಸರಿಸಿವೆ. ಅಕ್ರಮ ಗಣಿಗಾರಿಕೆಯಿಂದ ಪರಿಸರದ ಮೇಲೆ ಅಗುವ ತೊಂದರೆಯನ್ನು ಮಕ್ಕಳ ಕಣ್ಣಿನಿಂದ ಲೇಖಕರು ವಿವರಿಸಿದ್ದಾರೆ.
ಈ ಕಾದಂಬರಿಯಲ್ಲಿ ಪರಿಸರದ ಬಗ್ಗೆ ಮಕ್ಕಳಿಗಿರುವ ಕಾಳಜಿ, ಪರಿಸರ ರಕ್ಷಣೆ ಹೋರಾಟದಲ್ಲಿ ಮಕ್ಕಳ ಪಾತ್ರ, ತಾವೇ ಯಾವುದೋ ಹೊಳಹುಗಳನ್ನು ಕಂಡುಕೊಂಡು ಪತ್ತೇದಾರರಾಗಿ ಹುಡುಕುವ ರೀತಿ, ಗಣಿಗಾರಿಕೆಯ ಬಗ್ಗೆ ಮಕ್ಕಳಿಗಿರುವ ಕುತೂಹಲವನ್ನು ಈ ಕಾದಂಬರಿಯು ವಿವರಿಸುತ್ತದೆ. ಶಂಕರ, ಜಾನು,ತೇಜು ಎಂಬ ಪುಟ್ಟ ಪಾತ್ರಗಳ ಸುತ್ತ ಕಥೆ ಹೆಣೆಯಲಾಗಿದ್ದು, ಶಾಲೆಯ ರಜಾದಿನಗಳಲ್ಲಿ ಆಟ ಆಡಲು ಕಾಡಿಗೆ ಹೋದಾಗ ಇವರು ಅಕ್ರಮ ಗಣಿಗಾರಿಕೆಗೆ ಸಾಕ್ಷಿಯಾದ ರೀತಿಯನ್ನು ಸ್ವಾರಸ್ಯಕರವಾದ ರೀತಿಯಲ್ಲಿ ವರ್ಣಿಸಲಾಗಿದೆ.
ಮಕ್ಕಳ ಓದು ಉಲ್ಲಸಿತವಾಗಬೇಕಾದರೆ, ಅವರಿಗೆ ರುಚಿಸುವ ಸಾಹಿತ್ಯದ ಸ್ವಾರಸ್ಯಕರ ಕತೆಗಳು ಬೇಕು. ಹೊಸಗಾಲದ ಮಕ್ಕಳಿಗೆ ಹೊಸ ಹೊಸ ಓದು ಲಭ್ಯವಾಗಬೇಕು ಎಂಬ ಆಶಯದಿಂದ ಈ ರೀತಿ ಸರಣಿಯ ರೂಪದಲ್ಲಿ ಕಾದಂಬರಿಗಳನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ.
©2024 Book Brahma Private Limited.