‘ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು’ ಲೇಖಕ ಗುಂಡುರಾವ್ ದೇಸಾಯಿ ಅವರು ಬರೆದಿರುವ ಮಕ್ಕಳ ಕಾದಂಬರಿ. ಈ ಕೃತಿಗೆ ಡಾ. ಆನಂದ ಪಾಟೀಲ, ರಾಜಶೇಖರ ಕುಕ್ಕುಂದಾ, ತಮ್ಮಣ್ಣ ಬೀಗಾರ ಅವರ ಬೆನ್ನುಡಿ ಬರಹಗಳಿವೆ. ಪುಸ್ತಕದ ಕುರಿತು ಬರೆದಿರುವ ತಮ್ಮಣ್ಣ ಬೀಗಾರ ಅವರು ಓದುಗನನ್ನು ಸೆಳೆದು ಆವರಿಸಿಕೊಳ್ಳುವ ಈ ಕಾದಂಬರಿ ಸೊಳ್ಳೆಯ ಮೂಲಕ ಗೆಲುವಾಗಿಯೇ ಒಳಿತನ್ನು ಬಿತ್ತುತ್ತದೆ. ಆನಂದ ಪಾಟೀಲರ ‘ಪುಟ್ಟಾರಿ ಆನೆ ಪುಟ್ ಪುಟ್’ ನೆನಪಿಸುವ ಈ ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು ಕಾದಂಬರಿ ತನ್ನದೇ ಆದ ರೀತಿಯಲ್ಲಿ ಓದುಗನ ಫ್ರೆಂಡ್ ಆಗುತ್ತದೆ. ಈಗಾಗಲೇ ಮಕ್ಕಳೇನು ಸಣ್ಣವರಲ್ಲ ಎನ್ನುವ ಕಥಾ ಸಂಕಲನದಲ್ಲಿ ಹೊಸ ಉಣಿಸನ್ನು ತಂದಿದ್ದ ಗುಂಡುರಾವ್ ದೇಸಾಯಿ ಅವರು ಇಲ್ಲಿ ಪ್ಯಾಂಟಸಿಯನ್ನು ಬಳಸಿಕೊಂಡು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಓದುಗರಿಗೆ ಮತ್ತಷ್ಟು ಖುಷಿಯ ಉಣಿಸನ್ನು ನೀಡಿದ್ದಾರೆ. ಕನ್ನಡದ ಮಕ್ಕಳ ಲೋಕದ ಖುಷಿಯನ್ನು ಈ ಕಾದಂಬರಿ ವಿಸ್ತರಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ.
©2025 Book Brahma Private Limited.