ಕಾಡೆಂದರೆ ಮಕ್ಕಳಿಗೆ ಕುತೂಹಲ, ವನ್ಯ ಜೀವಿಗಳೆಂದರೆ ಪ್ರೀತಿ-ಆಸಕ್ತಿ. ಕಾಡಿನ ಅನುಭವವನ್ನು ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ರಚಿಸಲಾದ ಕಾದಂಬರಿ. ಸರಳವಾದ ಕನ್ನಡದಲ್ಲಿ ರಚಿತವಾಗಿರುವ ಈ ಕಾದಂಬರಿಯನ್ನು ಓದಿ ಮುಗಿಸುತ್ತಿದ್ದಂತೆ ಕಾಡು ಹೊಕ್ಕು ಹೊರ ಬಂದ ಅನುಭವ ಆಗುತ್ತದೆ. ಮಕ್ಕಳಲ್ಲಿ ಆಸಕ್ತಿ ಹುಟ್ಟಿಸಿ-ಕುತೂಹಲ ತಣಿಸುವಲ್ಲಿ ಕಾದಂಬರಿ ಯಶ ಕಂಡಿದೆ. ಮಕ್ಕಳನ್ನೇ ಗಮನದಲ್ಲಿ ಇಟ್ಟುಕೊಂಡು ರಚಿತವಾಗಿರುವ ಈ ಕಾದಂಬರಿಯು ಮಕ್ಕಳ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಮಕ್ಕಳ ಸಾಹಿತಿಯಾಗಿ ಹೆಸರು ಮಾಡಿರುವ ಚಂದ್ರಕಾಂತ ಕರದಳ್ಳಿ ಅವರು ಮಕ್ಕಳಿಗೆ ಪ್ರಿಯವಾಗುವ ಹಾಗೆ ಕಾದಂಬರಿಯ ಮೂಲಕ ಕಾಡಿನ ವಿಭಿನ್ನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಕಾಡು ಮತ್ತು ನಾಡಿನ ನಡುವಿನ ಸಂಬಂಧವನ್ನು ಬೆಸೆಯುವ ಹಾಗೂ ಆರೋಗ್ಯಕರ ಮನಸ್ಸುಗಳನ್ನು ಸೃಷ್ಟಿಸುವ ಕಾದಂಬರಿಯು ಓದುಗರ ಮನ ಗೆಲ್ಲುತ್ತದೆ. ಈ ಕಾದಂಬರಿಗೆ ಕೇಂದ್ರ ಸಾಹಿತ್ಯ ಆಕಾಡೆಮಿಯ ’ಬಾಲ ಸಾಹಿತ್ಯ ಪುರಸ್ಕಾರ’ ಸಂದಿದೆ.
©2024 Book Brahma Private Limited.