ಲೇಖಕ ವೈ.ಜಿ.ಭಗವತಿ. ಅವರ ‘ಮಕ್ಕಳು ಓದಿದ ಟೀಚರ್ ಡೈರಿ’, ಮಕ್ಕಳ ಕಾದಂಬರಿಯಾಗಿದೆ. ಬಾಲಕಿಯ ಸಂವೇದನೆ ಇರುವ ಕಾದಂಬರಿ ಇದು. ಶಾಲಿನಿ ಟೀಚರ್ ಅವರಿಗೆ ಡೈರಿ ಬರೆಯುವ ಹವ್ಯಾಸ.ಅವರ ಶಾಲಾ ಮಕ್ಕಳ ಟೀಚರ್ ಡೈರಿ ಓದುವ ಮೂಲಕ ಈ ಕಾದಂಬರಿ ಪ್ರಾರಂಭವಾಗುತ್ತದೆ. ಬಾಲಕಿ ಶಾಲಿನಿಯ ಹಠ, ಛಲ, ಸಿಡುಕಿನ ಸ್ವಭಾವಗಳು ಸಹಜವಾಗಿ ಮೂಡಿಬಂದಿವೆ. ಹದಿನಾಲ್ಕು ಅಧ್ಯಾಯಗಳಲ್ಲಿ ಕಾದಂಬರಿಯ ಹರವು ಚಾಚಿಕೊಂಡಿದೆ. ರುಸ್ತುಂ ಮಾಸ್ರರರ ಪಾತ್ರ ಅನನ್ಯತೆಯಿಂದ ಕೂಡಿದೆ. ಮಾತುಬಾರದ ಫಕ್ಕೀರ ಸುಧಾರಿಸಿದ್ದು ಹೇಗೆ? ಅವನ ತಾಯಿ ಶಾಲಿನಿ ಟೀಚರ್ ಅವರನ್ನು ಪ್ರತಿ ಬಾರಿಯೂ ಅದೇಕೆ ದಿಟ್ಟಿಸಿ ನೋಡುತ್ತಿದ್ದಳು? ಶಾಲಿನಿ ಟೀಚರ್ ಅವರ ಬಾಳಿನ ವಿಚಿತ್ರ ತಿರುವುಗಳ ಕಥೆ ಕುತೂಹಲದಿಂದ ಕೂಡಿದೆ. ಸಂತೋಷ ಸಸಿಹಿತ್ಲು ಅವರ ಆಕರ್ಷಕ ಮುಖಪುಟ. ಡಾ.ಆನಂದ ಪಾಟೀಲ ಸರ್ ಬಿಡಿಸಿದ ಒಳ ಚಿತ್ರಗಳು ಮಕ್ಕಳ ಗಮನ ಸೆಳೆಯುತ್ತವೆ. ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಕೃತಿ ಇದು.
©2025 Book Brahma Private Limited.