1994 ರಲ್ಲಿ ಕೇರಳ ರಾಜ್ಯದ ಬಾಲ ಸಾಹಿತ್ಯ ಇನ್ಸಿಟ್ಯೂಟ್ ನೀಡುವ ’ಅತ್ಯುತ್ತಮ ಸೃಜನಶೀಲ ಕೃತಿ’ ಎನ್ನುವ ಪುರಸ್ಕಾರಕ್ಕೆ ಪಾತ್ರವಾದ ’ಕನಸಿನೂರಿನ ಕಿಟ್ಟಣ್ಣ’ ಎನ್ನುವ ಮಕ್ಕಳ ಕಾದಂಬರಿಯ ಮೂಲ ಕರ್ತೃ ಇ. ಪಿ ಪವಿತ್ರನ್. ಮಲಯಾಳಂ ಭಾಷೆಯಿಂದ ಕನ್ನಡಕ್ಕೆ ತಂದವರು ಕೆ. ಪ್ರಭಾಕರನ್.
ಶೀರ್ಷಿಕೆಯೇ ಸೂಚಿಸುವಂತೆ ಈ ಕಾದಂಬರಿಯ ನಾಯಕ ಕಿಟ್ಟಣ್ಣ. ಕನಸಿನೂರು ಎಂಬ ಪುಟ್ಟಹಳ್ಳಿಯ ಮಧ್ಯಮವರ್ಗದ ಜಮೀನುದಾರಿ ಕುಟುಂಬವೊಂದರಲ್ಲಿ ಜನಿಸಿದ ಕಿಟ್ಟಣ್ಣನ ಬುದ್ದಿಶಕ್ತಿ, ಅವನ ನಿಸರ್ಗಪ್ರೇಮ, ನಿಸರ್ಗದೊಂದಿಗಿನ ಅವನ ವಿಚಿತ್ರ ಒಡನಾಟ, ಅವನಿಂದಾಗುವ ಸಾಹಸಗಳು, ಅವನ ಬದುಕಿನಲ್ಲಾಗುವ ಆಕಸ್ಮಿಕ ತಿರುವುಗಳು ಮತ್ತು ಆಶ್ಚರ್ಯಕರ ಬೆಳವಣಿಗೆಗಳು ಇಡೀ ಕಾದಂಬರಿಯ ಕಥಾನಕದ ವಿವಿಧ ಶಾಖೆಗಳಾಗಿ ಟಿಸಿಲೊಡೆಯುತ್ತಾ ಹೋಗುತ್ತವೆ.
©2025 Book Brahma Private Limited.