ಸಾಹಿತ್ಯದಲ್ಲಿ "ಕಾದಂಬರಿ" ಎಂಬದು ಕಾವ್ಯ ಮತ್ತು ಕಥೆಗಳಿಗೆ ಹೋಲಿಸಿದರೆ ಹೊಸ ಪ್ರಕಾರ. ಮತ್ತು ಕಥೆ ಕಾವ್ಯದಷ್ಟು ಮಕ್ಕಳು ಕಾದಂಬರಿಗೆ ಆಕರ್ಷಿತರಾಗುವುದು ಕಡಿಮೆ. ಆದರೇ ಕಾವ್ಯ ಕಥೆಯ ಸಮ್ಮಿಲಿತ ಹಾಗೂ ಒಂದು ಕಾದಂಬರಿಯು ಕಾವ್ಯ,ಕಥೆಯಷ್ಟೇ ಮಕ್ಕಳಿಗೆ ಹತ್ತಿರವಾಗುವ ಹಾಗೆ ಸಂರಚನೆ ಗೊಂಡಿದೆ. ಹಾಗೆಯೇ ಒಂದು ಕಾದಂಬರಿ ತನ್ನಷ್ಟಕ್ಕೆ ತಾನೇ ಸಹಜವಾಗಿ ಬೆಳೆದು ತನ್ನ ವಿಶಿಷ್ಟ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ಅಜ್ಜನ ಮನೆಯ ಅಂಗಳವು ಬಾಲವನಕ್ಕೆ ಹಾರಲು ಬಯಸುವ ಮಕ್ಕಳಿಗೆ ಹಾಗೂ ಬಾಲವನವನ್ನು ನಿರ್ಮಿಸಲು ಹಂಬಲಿಸುವ ಅಜ್ಜನಿಗೆ ವೇದಿಕೆಯಾಗಿ ಇಲ್ಲಿ ಪ್ರತಿಮಾತ್ಮಕವಾಗಿ ರೂಪಗೊಂಡಿದೆ.
©2024 Book Brahma Private Limited.