ಮುತ್ತಳ್ಳಿ ಎಂಬ ಹಳ್ಳಿಯ ಮಕ್ಕಳ ಸಾಹಸದ ಕತೆ ‘ಆ 36 ದಿನಗಳು!!’. ಈ ಕೃತಿಯ ಕರ್ತೃ ಮತ್ತೂರು ಸುಬ್ಬಣ್ಣ. ತಮ್ಮ ಊರಿನ ರಾಮದೇವರ ಗುಡಿಯ ವಿಗ್ರಹಗಳನ್ನು ಕದ್ದವರನ್ನು ಹಿಡಿಯಲು ಪೊಲೀಸರೊಂದಿಗೆ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಕತಾ ವಸ್ತುವನ್ನು ಹೊಂದಿದೆ. ಕಳ್ಳತನವಾದದ್ದು ಹೇಗೆ, ಮಕ್ಕಳು ಕಾರ್ಯಾಚರಣೆ ಶುರು ಮಾಡಿದ್ದು ಹೇಗೆ? ಕೊನೆಗೆ ಕಳ್ಳರು ಸಿಗುತ್ತಾರಾ? ಎಂಬ ಕುತೂಹಲ ಕಾದಂಬರಿಯುದ್ದಕ್ಕೂ ಸಾಗುವ ಅವಧಿಯೇ ‘ಆ 36 ದಿನಗಳು’. ಹಳ್ಳಿಯ ಚಿತ್ರಣ, ಮಂಗನಾಡಿಸುವುದು ಹೀಗೆ ಬಗೆ ಬಗೆಯ ಪಾತ್ರಗಳು ಓದುಗರನ್ನು ಸೆಳೆಯುತ್ತವೆ.
©2025 Book Brahma Private Limited.