ಆಯಲಿಸ್ ಇನ್ ವಂಡರ್ ಲ್ಯಾಂಡ್, ಅರೇಬಿಯನ್ ನೈಟ್ಸ್, ಜಂಗಲ್ ಬುಕ್, ಫ್ಯಾಂಟಮ್ ಇತ್ಯಾದಿ ಕಾಲ್ಪನಿಕ ಕಥೆಗಳು ಮಕ್ಕಳಿಗೆ ಇಷ್ಟ. ಅದೇ ಮಾದರಿಯಲ್ಲಿ ಅಂಟಾರ್ಕಟಿಕಾ ಎಂಬ ಮಕ್ಕಳ ವೈಜ್ಞಾನಿಕ ಕಾದಂಬರಿಯನ್ನು ಬರೆದವರು-ಆರ್.ಕೆ.ಶಾನಭೋಗ. ಈ ಕಾದಂಬರಿಯಲ್ಲಿ ಒಬ್ಬ ಪುಟಾಣಿ ಬಾಲಕ ಅಂಟಾರ್ಕಟಿಕಾ ಪ್ರದೇಶವನ್ನು ಹೇಗೆ ಸೇರಿದ? ಆತ ಅಲ್ಲಿಯ ಜಲಚರಗಳೊಂದಿಗೆ ಹೇಗೆ ಜೀವಿಸುತ್ತಾನೆ. ಅವುಗಳೊಂದಿಗೆ ಹೇಗೆ ಆಟವಾಡುತ್ತಾನೆ. ಆ ಪ್ರದೇಶದ ವಾತಾವರಣ, ಹವಾಮಾನದ ವಿವರ ಮಾಹಿತಿಯೂ ಸೇರಿದಂತೆ ಕಥೆ ಬೆಳೆಯುತ್ತಾ ಹೋಗಿ ಮಕ್ಕಳಿಗೆ ಕುತೂಹಲ ಕೆರಳಿಸುತ್ತದೆ. ಕಥೆ ತುಂಬಾ ಪರಿಣಾಮಕಾರಿ ಯಾಗಿರುವಂತೆ ಸಂದರ್ಭಕ್ಕನುಸಾರವಾಗಿ ‘ಸತ್ಯ ಕಲಾಧ್ವನಿ’ ಅವರ ರೇಖಾಚಿತ್ರಗಳು ಮುದ ನೀಡುತ್ತವೆ.
©2024 Book Brahma Private Limited.