ಹಿಂದಿಯ ಪ್ರಸಿದ್ಧ ಬರಹಗಾರ ಡಾ. ನಾಗೇಶ್ ಪಾಂಡೇಯ ’ಸಂಜಯ’ ಅವರು ಮಕ್ಕಳಿಗಾಗಿ ಬರೆದ ಕಾದಂಬರಿಯನ್ನು ಡೊಂಕು ಸೇತುವೆ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ ಡಾ. ಮಾಲತಿ ಆರ್ ಭಟ್.
ಜೀವನ ಒಂದು ಪರೀಕ್ಷೆ. ಪರೀಕ್ಷೆ ಯಾವಾಗಲೂ ಸುಲಭವಾಗಿ ಇರುತ್ತದೆ ಎಂದು ಊಹಿಸಲು ಸಾಧ‍್ಯವಿಲ್ಲ. ಏರಿಳಿತಗಳ ಕಠಿಣ ದಾರಿಯಲ್ಲಿ ಸಾಗುತ್ತಾ, ಸಫಲತೆಯ ಶಿಖರ ಮುಟ್ಟಿದಾಗಲೇ ನಮಗೆ ಸಂತಸ ಸಿಗೋದು. ಎಂಥ ಪ್ರತಿಕೂಲ ಸನ್ನಿವೇಶದಲ್ಲೂ ಸೋಲನ್ನು ಒಪ್ಪಿಕೊಳ್ಳದಿರುವುದೇ ದೊಡ್ಡ ಸಂಗತಿ. ನಿರಾಸೆಗೊಳ್ಳಬಾರದು, ಎಲ್ಲವನ್ನು ಆತ್ಮವಿಶ್ವಾಸದ ಬಲದಿಂದ ಎದುರಿಸಬೇಕು. ಆತ್ಮ ವಿಶ್ವಾಸದಿಂದ ಎಂಥ ಪ್ರಸಂಗದಿಂದಲೂ ಪಾರಾಗಲೂ ಸಾಧ್ಯ. ಬದುಕಿನ ಕಠಿಣ ತಿರುವುಗಳನ್ನು ’ಡೊಂಕು ಸೇತುವೆ’ ಕಾದಂಬರಿ ಪರಿಚಯಿಸುತ್ತದೆ.
©2025 Book Brahma Private Limited.