ಉಪ್ಪನ್ನು ತಯಾರಿಸುವ ಒಂದು ಮಡಿಯಲ್ಲಿ ತಾನಾಗಿ ರೂಪುಗೊಂಡ ಒಂದು ಉಪ್ಪಿನಗೊಂಬೆ ಊರು ತಿರುಗಲು ಹೊರಡುತ್ತದೆ. ಹೀಗೆ ಹೊರಟ ಗೊಂಬೆ, ಚನ್ನಪಟ್ಟಣ ತಲುಪಿ ಅಲ್ಲಿಯ ಮರದ ಗೊಂಬೆಗಳ ನಡುವೆ ಸೇರಿ ಅವುಗಳ ಸ್ನೇಹ ಬೆಳೆಸಿಕೊಂಡು ಆ ಗೊಂಬೆಗಳಿಗೆ ಸಮುದ್ರದ ಬಗ್ಗೆ ತಿಳಿಸಿ ಅವುಗಳನ್ನ ಕರೆದುಕೊಂಡು ಪ್ರವಾಸ ಹೊರಡುತ್ತದೆ. ಹೀಗೆ ಹೊರಟ ಗೊಂಬೆಗಳು ತಾವು ಹುಟ್ಟಿದ ಕಾಡನ್ನು ನೋಡುತ್ತವೆ, ಕೊನೆಗೆ ಉಪ್ಪಿನಗೊಂಬೆ ತನ್ನ ನೆಲೆಯಾದ ಸಮುದ್ರಕ್ಕೆ ಗೊಂಬೆಗಳನ್ನು ಕರೆತರುತ್ತದೆ. ಮಕ್ಕಳನ್ನು ಕಲ್ಪನಾಲೋಕದಲ್ಲಿ ತೇಲಿಬಿಡುವ ರಮ್ಯತೆ ಇಲ್ಲಿನ ಕತೆಗೆ ಇದೆ.
©2024 Book Brahma Private Limited.