ಪಶ್ಚಿಮ ಘಟ್ಟಗಳ ಪೂರ್ವದ ಅಂಚಿನಲ್ಲಿರುವ ಆನೆಕೆರೆ ಅರಣ್ಯದ ಆನೆಗಳು ಮರಿಗೆ ಏನೋ ತೊಡಕುಂಟಾಗುತ್ತದೆ. ಆಗ ಕಾಡುಪ್ರೇಮಿ ಬಡ ರೈತನೊಬ್ಬ ಆಕಸ್ಮಿಕವಾಗಿ ಆನೆ ಮರಿಯನ್ನು ಆ ರೈತನೇ ಸಲುಹಬೇಕಾಗಿ ಬರುತ್ತದೆ. ನಂತರ ಆನೆಗಳ ಸಹವಾಸದಿಂದ ಆತನಿಗೆ ‘ಆನೆಪ್ಪ’ ಎಂದೇ ಹೆಸರಾಗುತ್ತದೆ. ಆದರೆ ಆನೆಮರಿ ಎಲ್ಲರ ಕಣ್ಮಣಿಯಾಗಿ ದೊಡ್ಡದಾಗುತ್ತಾ ಹೋದಂತೆ ಅಲ್ಲಿನ ಮಠದ ಸ್ವಾಮಿಗಳ, ಸರ್ಕಸ್‌ನವರ ಕಣ್ಣು ಬಿದ್ದು ಹೇಗಾದರೂ ಆನೆಮರಿಯನ್ನು ವಶಪಡಿಸಿಕೊಳ್ಳಲು ಬರುತ್ತಾರೆ. ಇಂತಹ ವಿಪತ್ತಿನಲ್ಲಿ ಆನೆಪ್ಪ ಏನು ಮಾಡುತ್ತಾನೆ ಎಂಬುದೇ ಈ ಮಕ್ಕಳ ಕಾದಂಬರಿಯ ಕತಾ ಹಂದರ. ಪಶ್ಚಿಮ ಘಟ್ಟಗಳ ಪೂರ್ವದ ಅಂಚಿನ ಪರಿಸರ ಹಾಗೂ ಅಲ್ಲಿನ ಮನೋಹರ ವೈವಿಧ್ಯತೆಯ ವಿವರಗಳು ಮಕ್ಕಳನ್ನು ಕುತೂಹಲಿಗಳನ್ನಾಗಿಸುತ್ತದೆ.
©2025 Book Brahma Private Limited.