‘ನಾನೂ ಅಂಬೇಡ್ಕರ್’ ಹ. ಸ. ಬ್ಯಾಕೋಡ ಅವರು ಮಕ್ಕಳಿಗಾಗಿ ಬರೆದಿರುವ ಕಾದಂಬರಿ. ಈ ಕೃತಿಗೆ ಲೇಖಕ ಸಿ.ಎನ್. ರಾಮಚಂದ್ರನ್ ಬೆನ್ನುಡಿ ಬರೆದು ‘ಇದೊಂದು ಪ್ರಯೋಗಾತ್ಮಕ ಕೃತಿ. ಯಾವ ಜಾತಿ-ವರ್ಗ-ಧರ್ಮಕ್ಕೆ ಸೇರಿದ ಮಕ್ಕಳೇ ಆಗಲಿ, ಅವರಲ್ಲಿ ಅಂಬೇಡ್ಕರ್ ಅಥವಾ ಗಾಂಧಿ ಅಥವಾ ಇತರ ಮಹಾನುಭಾವರ ಪ್ರತಿಭೆ-ಗುಣಗಳು, ಆದರೆ ಅವುಗಳನ್ನು ಗುರುತಿಸಿ, ಅವುಗಳು ಫಲಪ್ರದವಾಗಿ ಬೆಳೆಯುವುದಕ್ಕೆ ಸಮಾಜದ ಇತರ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಸಹಾಯ- ಪ್ರೋತ್ಸಾಹಗಳು ಅವಶ್ಯಕ ಎನ್ನುವುದನ್ನು ಈ ಕೃತಿ ಓದುಗರಿಗೆ ಮನದಟ್ಟು ಮಾಡುತ್ತದೆ. ಜೊತೆಗೆ ಈ ಅಂಶವನ್ನೇ ಬೇರೆ ಶಬ್ದಗಳಲ್ಲಿ ಹೇಳಬೇಕಾದರೆ, ಪ್ರಕೃತಿ ಹಾಗೂ ಪರಿಸರ (Nature-Environment), ಪ್ರಕೃತಿದತ್ತ ಪ್ರತಿಭೆ ಹಾಗೂ ಸಾಮಾಜಿಕ ಪರಿಸರ ಇವುಗಳು ಪರಸ್ಪರ ಪೋಷಕವಾಗಿದ್ದರೆ ಮಾತ್ರ ಮಹಾನ್ ಸಾಧಕರು ಸಮಾಜದಲ್ಲಿ ಮೂಡಿ ಬರಬಹುದು ಎಂಬುದು ಈ ಕೃತಿಯ ಆಶಯ. ಈ ಕೃತಿ ಬೆಳೆಯುವ ಮಕ್ಕಳಿಗೆ ಒಂದು ಆದರ್ಶ ಮಾದರಿಯನ್ನು ಕಟ್ಟಿಕೊಡುತ್ತದೆ. ಅಷ್ಟೇ ಅಲ್ಲದೆ, ಪರೋಕ್ಷವಾಗಿ, ಬಡ ಹಾಗೂ ಕೆಳವರ್ಗದ ಮಕ್ಕಳನ್ನು ಉಪೇಕ್ಷಿಸದೆ ಅವರಿಗೂ ಅವಶ್ಯಕ ಸಹಾಯ-ಪ್ರೋತ್ಸಾಹಗಳನ್ನು ನೀಡುವಂತೆ ಸಮಾಜವನ್ನು ಪ್ರೇರೇಪಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ 2020ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ.
©2024 Book Brahma Private Limited.