ಲೇಖಕ ಮೋಹನ್ ವರ್ಣೀಕರ್ ಅವರ ಮಕ್ಕಳ ಸಾಹಿತ್ಯ ಕೃತಿ ʻದ್ವೀಪದಲ್ಲಿ ಮಕ್ಕಳುʼ (ಮಕ್ಕಳ ಸಾಹಸ ಪ್ರಧಾನ ಕಾದಂಬರಿ). ಒಂದು ನಿರ್ಜನ ದ್ವೀಪದಲ್ಲಿ ಎರಡು ದಿನಗಳಲ್ಲಿ ನಡೆಯುವ ಅನೇಕ ಕೌತುಕಭರಿತ ಘಟನೆಗಳನ್ನು ಒಟ್ಟುಮಾಡಿ ಲೇಖಕರು ಇಲ್ಲಿ ಕತೆ ಹೆಣೆದಿದ್ಧಾರೆ. ಕತೆ ಓದುತ್ತಾ ಹೋದಂತೆ ಹೆಜ್ಜೆ ಹೆಜ್ಜೆಗೂ ಓದುಗರ ಕುತೂಹಲವನ್ನು ಕೆರಳಿಸುತ್ತಾ ಸಾಗುವುದು ವೈಶಿಷ್ಟ್ಯವಾಗಿದೆ. ಜೊತೆಗೆ ಕತೆ ಇನ್ನಷ್ಟು ಅರ್ಥವಾಗಲು ರಘುಪತಿ ಶೃಂಗೇರಿಯವರು ಇಲ್ಲಿ ಸಂದರ್ಭಕ್ಕೆ ತಕ್ಕಹಾಗಿನ ಚಿತ್ರಗಳನ್ನು ರಚಿಸಿದ್ಧಾರೆ. ಹೀಗೆ ಮಕ್ಕಳಿಗೆ ಕತೆಯ ಮೂಲಕ ಮನರಂಜನೆ ನೀಡುವುದರ ಜೊತೆಗೆ ಅವರನ್ನು ಮಾನವೀಯ ಮೌಲ್ಯಗಳತ್ತ ಯೋಚಿಸುವಂತೆ ಈ ಕೃತಿ ಮಾಡುತ್ತದೆ.
©2024 Book Brahma Private Limited.