‘ಸಪ್ತರ್ಷಿ ದ್ವೀಪ’ ಕೃತಿಯು ಶರಣಗೌಡ ಎರಡೆತ್ತಿನ ಅವರ ಮಕ್ಕಳ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : `ಸಪ್ತರ್ಷಿ ದ್ವೀಪ‘ ವಿದ್ಯಾರ್ಥಿ ಗಳ ಸ್ವಾರಸ್ಯ ಹಾಗೂ ಕೌತುಕಭರಿತ ಪ್ರವಾಸ ಕಥನ ಲೇಖಕರ ಸುಲಲಿತ ನಿರೂಪಣೆಯಲ್ಲಿ ಮೂಡಿ ಬಂದಿದೆ. ಮಕ್ಕಳ ಮನಸ್ಸಿಗೆ ರಂಜನೆ ಒದಗಿಸುವುದು `ಸಪ್ತರ್ಷಿ ದ್ವೀಪ‘ ಕಾದಂಬರಿಯ ಮುಖ್ಯ ಉದ್ದೇಶವಾಗಿದ್ದರೂ, ರಂಜನೆಯ ಜೊತೆಗೆ ದೇಶಭಕ್ತಿ ಹಾಗೂ ಸಾಹಸ ಪ್ರವೃತ್ತಿ ಉದ್ದೀಪನದ ಕೆಲಸವನ್ನೂ ಕಾದಂಬರಿ ಮಾಡುತ್ತದೆ. `ಶಾಲೆ, ಬೋಧಕ ವರ್ಗ ಮತ್ತು ವಿದ್ಯಾರ್ಥಿ ಗಳಲ್ಲಿಯ ಸರಸ ಸುಮಧುರ ಪ್ರೀತಿ ವಿಶ್ವಾಸಗಳ ಸಂಬಂಧವನ್ನು ಶರಣಗೌಡ ಅವರು ಸೊಗಸಾಗಿ-ಸಹಜವಾಗಿ ಕಥನ ರೂಪಕವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ‘ ಎಂದು ಈಶ್ವರಚಂದ್ರ ಚಿಂತಾಮಣಿ ಮುನ್ನುಡಿಯಲ್ಲಿ ಶ್ಲಾಘಿಸಿದ್ದಾರೆ. ಕಾದಂಬರಿಯಲ್ಲಿ ಬಳಸಿಕೊಂಡಿರುವ ಚಿತ್ರಗಳು ಪುಸ್ತಕದ ಸೌಂದರ್ಯವನ್ನು ಹೆಚ್ಚಿಸಿವೆ.
©2024 Book Brahma Private Limited.