ಒಳ್ಳೆಯ ದೆವ್ವ

Author : ಬಸು ಬೇವಿನಗಿಡದ

Pages 148

₹ 160.00




Year of Publication: 2022
Published by: ವಸಂತ ಪ್ರಕಾಶನ
Address: 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011
Phone: 7892106719

Synopsys

ಒಳ್ಳೆಯ ದೆವ್ವ ಡಾ. ಬಸು ಬೇವಿನ ಗಿಡದ ಅವರು ಮಕ್ಕಳಿಗಾಗಿ ಬರೆದ ಕಾದಂಬರಿಯಾಗಿದೆ. ಹೆಜ್ಜೆ ಹೆಜ್ಜೆಗೂ ಮೈ ನವಿರೆಳಿಸುವ ಅದ್ಬುತ ಕಾದಂಬರಿಯಾಗಿದೆ. ಕೊನೆಗೆ ದೆವ್ವದ ಕಲ್ಪನೆ ಹುಸಿ ಎಂಬುದನ್ನು ರೋಚಕವಾಗಿ ಸ್ಫೋಟಿಸಿ ಮೂಢನಂಬಿಕೆಗಳನ್ನು ಉಚ್ಚಾಟಿಸುವ ರೀತಿ ಆಕರ್ಷಕವಾಗಿದೆ. ಲವಲವಿಕೆಯ ಗದ್ಯ , ಮಕ್ಕಳಿಗೆ ಹಿತವಾಗುವಂತಹ ತಮಾಷೆ, ಪುಟ್ಟ ಪುಟ್ಟ ಗದ್ಯಗಳಿಂದ ಕೂಡಿರುವ ಕೌತುಕದ ಕತೆ ಮಕ್ಕಳ ಮನಸ್ಸನ್ನು ಸೊರೆಗೊಳ್ಳವುದರೊಂದಿಗೆ ಅವರ ವೈಚಾರಿಕ ಜಗತ್ತನ್ನು ಜಾಗೃತಗೊಳಿಸುತ್ತದೆ. ಎಂದು ಡಾ. ಎಚ್‌. ಎಸ್‌ ವೆಂಕಟೇಶ ಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಬಸು ಬೇವಿನಗಿಡದ
(12 July 1964)

ಕಥೆಗಾರ  ಹಾಗೂ ಅನುವಾದಕ ಬಸು ಬೇವಿನಗಿಡದ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬೇಂದ್ರೆ ಕಾವ್ಯ ಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ, ಉಗುಳುಬುಟ್ಟಿ , ನೆರಳಿಲ್ಲದ ಮರ, ಬೀಳದ ಗಡಿಯಾರ  (ಕಥಾ ಸಂಕಲನಗಳು), ಕನಸು, ಇಳೆಯ ಅರ್ಥ (ಕವನ ಸಂಕಲನಗಳು), ದಕ್ಕದ ಕಾಡು (ಅನುವಾದಿತ ಕಥೆಗಳ ಸಂಕಲನ) ಬಿ.ಎ. ಸನದಿ (ಜೀವನಚಿತ್ರ) , ನಾಳೆಯ ಸೈರ್ಯ, ಓಡಿ ಹೋದ ಹುಡುಗ ...

READ MORE

Related Books