ಅಮರೊ

Author : ಯಲ್ಲಪ್ಪ ಹಂದ್ರಾಳ

Pages 136

₹ 150.00




Year of Publication: 2020
Published by: ಅಭಿನವ ಪ್ರಕಾಶನ
Address: 17/18-2, ಮೊಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ ಬೆಂಗಳೂರು-560040

Synopsys

ಎಲ್ಲರ ಬಾಲ್ಯದೊಂದಿಗೆ ಮುಖಾ ಮುಖಿಯಾಗುತ್ತ ವಿವಿಧ ಸ್ತರದ ಮಕ್ಕಳ ಸಹಜ ನಡೆಯನ್ನು ಇಲ್ಲಿನ ಕಾದಂಬರಿಯಾಗಿಸಿದೆ. ಮಕ್ಕಳೊಂದಿಗೆ ಮಾತಿಗಿಳಿಯುವ, ಅವರ ಖುಷಿಯೊಂದಿಗೆ ಒಂದಾಗುವ, ಅವರ ಕಷ್ಟಗಳ ಕುರಿತು ಆದ್ಯತೆ ಹೊಂದುವ ಇವು ಮನರಂಜನೆಯ ಖುಷಿಯೊಂದಿಗೆ ಸಂಭ್ರಮಿಸುವಂತೆ ಮಾಡುತ್ತವೆ. ಸುಕೃತಿ ಭಟ್ನಾಕರ್‌ ಅವರ ಈ ಕೃತಿಯನ್ನು ಯಲ್ಲಪ್ಪ ಹಂದ್ರಾಳ ಅವರು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ.

About the Author

ಯಲ್ಲಪ್ಪ ಹಂದ್ರಾಳ
(01 January 1979)

ಮಕ್ಕಳ ಕತೆಗಾರ ಯಲ್ಲಪ್ಪ ಹಂದ್ರಾಳ ಅವರು 1979 ಜನೆವರಿ 01ರಂದು ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮೇವುಂಡಿ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ನಾಟಕ, ವಚನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಆಸಕ್ತಿ. ಶಾಲಾ ಮಕ್ಕಳಿಗಾಗಿ ಐದು ಕಿರುನಾಟಕಗಳನ್ನು ಬರೆದು ನಿರ್ದೆಶಿಸಿದ್ದಾರೆ. ‘ಕೋಣೆ ಕೂಸು ಕೊಳೀತು, ಓಣಿ ಕೂಸು ಬೆಳೀತು, ಸೊಳ್ಳೆ ಮತ್ತು ಶಿಕ್ಷಕ, ಮನೆಯೇ ಕಾರಣ, ಸಕಾಲ-ಸುಕಾಲ ಮತ್ತು ಯಮಲೋಕದಲ್ಲಿ ತಲ್ಲಣ ನಾಟಕಗಳು ಪ್ರದರ್ಶನಗೊಂಡಿವೆ. ಮಕ್ಕಳ ನಡುವೆ ಸಾಹಿತ್ಯ ಸಮಯ ಸೃಷ್ಟಿಸುತ್ತ ...

READ MORE

Related Books