ಪುಟ್ಟಾರಿ ಆನೆ ಪುಟ್ ಪುಟ್- ಮಕ್ಕಳ ಸಾಹಿತಿ ಆನಂದ ಪಾಟೀಲ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರ ಮಟ್ಟಕ್ಕೆ ಇಳಿದು ಬರೆಯುವ ಲೇಖಕರ ಈ ಕಾದಂಬರಿಯು ಮಕ್ಕಳ ಕಲ್ಪನಾ ಲೋಕವನ್ನು ವಿಸ್ತರಿಸುತ್ತದೆ. ಮನರಂಜನೆಯೂ ನೀಡುತ್ತದೆ. ಕಥೆ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಮುದ ನೀಡುವ ಸಂಭಾಷಣೆಯ ಪರಿ ಇತ್ಯಾದಿ ಅಂಶಗಳು ಸಾಹಿತ್ಯಕ ದೃಷ್ಟಿಯಿಂದ ಮನೋವಿಕಾಸದ ದೃಷ್ಟಿಯಿಂದ ಮಕ್ಕಳು ಮಾತ್ರವಲ್ಲ; ಓದುಗರ ಗಮನ ಸೆಳೆಯುತ್ತದೆ.
©2024 Book Brahma Private Limited.