ಸೂರಕ್ಕಿ ಗೇಟ್‌

Author : ವಿಜಯಶ್ರೀ ಹಾಲಾಡಿ

Pages 72

₹ 50.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

 ಲೇಖಕಿ ವಿಜಯಶ್ರೀ ಹಾಲಾಡಿ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ ’ಸೂರಕ್ಕಿಗೇಟ್’. ಮಕ್ಕಳ ಕುತೂಹಲ ಕೆರಳಿಸುವಂತಹ ಅನೇಕ ಪಾತ್ರಗಳು ಕೃತಿಯಲ್ಲಿವೆ. 

ಈ ಕಾದಂಬರಿಯ ಬಗ್ಗೆ ಲೇಖಕರು ಹೀಗೆನ್ನುತ್ತಾರೆ: “ಸೂರಕ್ಕಿ ಗೇಟ್' ಎಂಬ ಈ ಕಾದಂಬರಿಯನ್ನು ಬರೆದೆ ಎಂದರೆ ಅದು ಅಪ್ರಮಾಣಿಕತೆಯಾಗುತ್ತದೆ, ಬರೆಯುತ್ತ ಬರೆಯುತ್ತ ಇಲ್ಲಿನ ಪಾತ್ರಗಳು, ಸನ್ನಿವೇಶಗಳು ಅವಾಗಿಯೇ ಬೆಳೆಯುತ್ತಾ ಹೋದವು, ನಮ್ಮ ಬೆಕ್ಕುಗಳು, ನಾಯಿಮರಿಯೇ ಇಲ್ಲಿರುವ ಬಹುತೇಕ ಜೀವಗಳು. ಅವುಗಳಿರದಿದ್ದರೆ ನನ್ನ ಬರಹ ಎಲ್ಲಿರುತ್ತಿತ್ತು? ನಮೂರು ಹಾಲಾಡಿ ಗ್ರಾಮದ ಪುಟ್ಟ ಹಳ್ಳಿ ಮುದೂರಿಯ ನಿಸರ್ಗದಲ್ಲಿ ಬೆಳೆಯುತ್ತ ಬಾಲ್ಯದಲ್ಲಿ ಕಂಡದ್ದು, ಅನುಭವಿಸಿದ್ದೆಲ್ಲ ನನ್ನೊಳಗೆ ಸೇರಿಹೋಗಿದೆ. ಅಲ್ಲಿನ ಜನಜೀವನಕ್ಕೆ, ನಿಸರ್ಗಕ್ಕೆ ಅಪಾರ ಶಕ್ತಿ ಇದೆ, ಬರೆಸಿಕೊಳ್ಳುವ ತಾಕತ್ತಿದೆ. ನಾನು ಕಂಡುಕೊಂಡ ಇನ್ನೊಂದು ಸತ್ಯವೆಂದರೆ ಮಕ್ಕಳಿಗಾಗಿ ಏನಾದರೂ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಬರೆಯುವವರ ಮೈಮನಸ್ಸು ಮಗುವಾದಾಗ ಮಾತ್ರ ಒಂದೊಳ್ಳೆಯ ಪದ್ಯವೋ, ಗದ್ಯವೋ ಮೂಡಲು ಸಾಧ್ಯ. ಅಂತಹ ಸಂದರ್ಭಗಳು ನನ್ನ ಬದುಕಲ್ಲಿ ದಿನವೂ ಬರಲೆಂಬ ಆಶಯ ನನ್ನದು.

 

About the Author

ವಿಜಯಶ್ರೀ ಹಾಲಾಡಿ
(28 April 1975)

ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ತಂದೆ ಬಾಬುರಾವ್ ತಾಯಿ ಎಂ., ರತ್ನಾವತಿ. ಎಂ.ಎ., ಬಿ.ಎಡ್. ಪದವೀಧರರು. ಕೃತಿಗಳು: ಬೀಜ ಹಸಿರಾಗುವ ಗಳಿಗೆ (ಕವನ ಸಂಕಲನ-2009), ’ಪಪ್ಪು ನಾಯಿಯ ಪ್ರೀತಿ ( ಮಕ್ಕಳ ಸಾಹಿತ್ಯ ವಿಭಾಗದ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015 ರ ಪುಸ್ತಕ ಬಹುಮಾನ) , ಪ್ರಶಸ್ತಿ-ಪುರಸ್ಕಾರಗಳು: ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, (ಹಸ್ತಪ್ರತಿಗೆ-2007) , ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ. 2023ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪ್ರಶಸ್ತಿ ಲಭಿಸಿದೆ.    ...

READ MORE

Related Books