ಫ್ರಾಗಿ ಮತ್ತು ಗೆಳೆಯರು

Author : ತಮ್ಮಣ್ಣ ಬೀಗಾರ

Pages 84

₹ 80.00




Year of Publication: 2020
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯರಸ್ತೆ,3ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ, ತುಮಕೂರು-572102
Phone: 8073007475

Synopsys

ಪ್ರಾಗಿ ಮತ್ತು ಗೆಳೆಯರು-ಲೇಖಕ ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ ಇದು. ಮಕ್ಕಳ ಗೆಳೆಯರಾಗಿ ಕಪ್ಪೆ, ಹಕ್ಕಿ, ಚಿಟ್ಟೆಗಳೇ ಮಾತಾನಾಡಿರುವುದು ಕತೆಗಳ ವಿಶೇಷ. ಹಾರುವ ಕಪ್ಪೆಗಳು, ಬಾವಲಿಗಳು ಮುಂತಾದವೂ ಬಂದಿವೆ. ಹಸಿರಿನ ಪರಿಸರದಲ್ಲಿ, ತಿಳಿನೀರಿನ ಕೆರೆಯಲ್ಲಿ, ತಂಪಿನ ಗಾಳಿಯಲ್ಲಿ ಓಡಾಟವಿರುವ ಇಲ್ಲಿನ ಕತೆಗಳು ಮಕ್ಕಳು ಒಳಗೊಂಡು ದೊಡ್ಡವರಿಗೂ ಇಷ್ಟವಾಗುತ್ತದೆ.  ಮಕ್ಕಳ ಪ್ರತಿನಿಧಿಗಳಾಗಿ ಪುಂಡು, ಪುಟ್ಟಿ ಮತ್ತು ಚಿನ್ನು ಆಗಾಗ ಮಾತಾಡ್ತಾರೆ. ಪ್ರತಿ ಬಾರಿಯೂ ಹೊಸ ಪ್ರಯೋಗಕ್ಕೆ ಇಳಿಯುವ ಬೀಗಾರರು, ಕಪ್ಪೆ, ಹಕ್ಕಿ, ಚಿಟ್ಟೆಗಳ ಮೂಲಕ ಮಕ್ಕಳೊಂದಿಗೆ ಸಂವಹನ ನಡೆಸುತ್ತ ಪರಿಸರದ ಸಂಗತಿಗಳನ್ನು, ಬದುಕಿನ ಖುಷಿ ಹಾಗೂ ಅಪಾಯಗಳನ್ನು ನವಿರಾಗಿ ಮಕ್ಕಳಿಗೆ  ತಿಳಿಸಲು ಪ್ರಯತ್ನಿಸಿದ್ದಾರೆ.

About the Author

ತಮ್ಮಣ್ಣ ಬೀಗಾರ
(22 November 1959)

ಕತೆಗಾರ ತಮ್ಮಣ್ಣ ಬೀಗಾರ  ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ.  ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ...

READ MORE

Related Books