ಲೇಖಕಿ ಜಿ.ಆರ್. ಪರಿಮಳಾ ರಾವ್ ಅವರ ಮಕ್ಕಳ ಕಾದಂಬರಿ ‘ಬಾಲ ಕಥಾ ಪ್ರಾಣಿ ಪ್ರಪಂಚ’. ಈ ಕೃತಿಯಲ್ಲಿ ಎರಡು ಕಾದಂಬರಿಗಳಿದ್ದು ಬಾಲ ಕಥಾ ಪ್ರಾಣಿ ಪ್ರಪಂಚ ಹಾಗೂ ಬಾಲಕಥಾ ಸಸ್ಯ ಪ್ರಪಂಚ ಎಂಬ ಎರಡು ಕಾದಂಬರಿಗಳಿವೆ. ಕೃತಿಯಲ್ಲಿ ಶಿವಾನಂದ ಮೊಗೇರ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. “ಇದೊಂದು ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಚ್ಚುಮೆಚ್ಚಿನ ಪುಸ್ತಕವಾಗಿದ್ದು, ಇಲ್ಲಿ ಬರುವ ಕಿನ್ನರಿ, ಅಜ್ಜ-ಅಜ್ಜಿ, ಸಾಗರಕನ್ಯೆ, ನಿಮ್ಮನ್ನು ಮಾಯಾಲೋಕಕ್ಕೆ ಕರೆದೊಯ್ಯುತ್ತಾರೆ. ಮಲತಾಯಿ ಕಿರುಕುಳದಿಂದ ಬೇಜಸತ್ತು ಮನೆಬಿಟ್ಟು ಹೊರಗೆ ಬರುವ ಸಾರಾ ಮತ್ತು ಸಾಮಿ ಕಾಡುಪಾಲಾಗುತ್ತರೆ. ಇಲ್ಲಿ ಅವರ ಜೊತೆಯಾಗುವ ಕಿನ್ನರಿ, ಅಜ್ಜಿ ಅಜ್ಜಿಯಿಂದ ಆ ದಟ್ಟ ಕಾನನವು ಸುಂದರವಾಗಿ ಕಾಣುತ್ತದೆ. ಕಿನ್ನರಿ ಪ್ರವೇಶದಿಂದ ಓದುಗರಿಗೆ ಇದೊಂದು ದೃಶ್ಯಕಾವ್ಯದಂತೆ ಭಾಸವಾಗುತ್ತದೆ ಮತ್ತು ಮಕ್ಕಳಿಗೆ ಇಂತಹ ಒಂದು ಕಿನ್ನರಿ ನಮಗೂ ಸಿಗಬೇಕಿತ್ತು ಅನಿಸುತ್ತದೆ. ಕೆಲವೊಂದು ಕಡೆ ಡಿಸ್ಕವರಿ, ನ್ಯಾಷನಲ್ ಜಿಯಾಗ್ರಫಿ ಚಾನಲ್ ಗಳ ದೃಶ್ಯಗಳಂತೆ ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. ಪ್ರಾಣಿ ಮತ್ತು ಮೀನುಗಳ ಬಗ್ಗೆ ನಿಖರವಾದ ವೈಜ್ಞಾನಿಕ ಮಾಹಿತಿಯನ್ನು ಈ ಪುಸ್ತಕ ಕಲೆ ಹಾಕಿದೆ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.