ಮುದ್ದಣ ವಿರಚಿತ ರಾಮಾಶ್ವಮೇಧಂ

Author : ಗಾಯತ್ರಿ ನಾವಡ

Pages 230

₹ 160.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560092
Phone: 080-22107794

Synopsys

ಮುದ್ದಣ ಕವಿಕೃತ ಶ್ರೀ ರಾಮಾಶ್ವಮೇಧಂ ಕೃತಿಯನ್ನು ಹಲವು ಬಾರಿ ಬೇರೆ ಬೇರೆ ರೀತಿಯಲ್ಲಿ ಹಲವರು ಸಂಪಾದಿಸಿದನ್ನು ಕಾಣಬಹುದು. ಇದರಲ್ಲಿ ಮುದ್ದಣನ ಮೂಲ ಹಸ್ತಪ್ರತಿಯನ್ನೇ ಕಣ್ಣಾರೆ ಕಂಡು ಸಂಪಾದಿಸಿದ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಶಬ್ಧರೂಪ ಕಾಗುಣಿತವನ್ನು ಹಸ್ತಪ್ರತಿಯಲ್ಲಿದ್ದಂತೆಯೇ ಉಳಿಸಿಕೊಳ್ಳುವ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಪ್ರಸ್ತುತ ಗಾಯತ್ರೀ ನಾವಡೆಯವರು ಪ್ರೊ.ಜಿ. ವೆಂಕಟಸುಬ್ಬಯ್ಯನವರು ಸಂಪಾದಿಸಿದ ಸಂಪಾದನೆಯನ್ನು ಆಧಾರವಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಿದ್ದಾರೆ.

About the Author

ಗಾಯತ್ರಿ ನಾವಡ
(07 August 1954)

ಗಾಯತ್ರಿ ನಾವಡ ಅವರು 1954 ಆಗಸ್ಟ್ 7ರಂದು ಉಡುಪಿಯ ಕೋಟೇಶ್ವರದಲ್ಲಿ ಜನಿಸಿದರು. ತಾಯಿ ಕಮಲಮ್ಮ, ತಂದೆ ಅನಂತಕೃಷ್ಣ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ತುಳು ಅಕಾಡೆಮಿಯ ಮಾಜಿ ಸದಸ್ಯರು ಆಗಿದ್ದರು.  ಇವರ ಪ್ರಮುಖ ಕೃತಿಗಳೆಂದರೆ ನಮ್ಮ ಹೆಣ್ಣುಮಗು, ವಿರಚನೆ, ಭಾರತೀಯ ಸ್ತ್ರೀವಾದ ಒಂದು ಸಂಕಥನ, ಮಹಿಳಾ ಸಂಕಥನ (ಮಹಿಳಾ ಅಧ್ಯಯನ), ಸಿರಿಕತೆ, ಕರಾವಳಿ ಜಾನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಕರಾವಳಿ ಮಹಿಳಾ ಜನಪದ ಕಥೆಗಳು (ಜಾನಪದ), ತೇರು, ಸಾವಿರಾರು ಕೀರ್ತನೆಗಳು, ಕರಾವಳಿ ಮದುವೆ ಹಾಡುಗಳು (ಸಂಪಾದನೆ) ಮುಂತಾದವು. ಗಾಯತ್ರಿ ಅವರಿಗೆ ಡಾ.ಪೀಟರ್ ಜೆ.ಕ್ಲಾಸ್ ...

READ MORE

Related Books