ಕಣವಿಯವರ ಎಂಟನೆಯ ಸಂಕಲನ 'ಎರಡು ದಡ'. 1969ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಕವನ ಸಂಕಲನದಲ್ಲಿ 28 ಕವಿತೆಗಳಿವೆ. ಜೀವನದ ಸಂಕೀರ್ಣ ಅನುಭವವನ್ನು ಇಲ್ಲಿನ ಕವಿತೆಗಳು ಚಿತ್ರಿಸುತ್ತವೆ. ಕವಿಯ ಆಂತರಂಗಿಕ ಮತ್ತು ಬಾಹ್ಯ ವ್ಯಕ್ತಿತ್ವದ ಸ್ಪಂದನಗಳೆರಡೂ 'ಎರಡು ದಡ'ದ ಕವಿತೆಗಳಲ್ಲಿ ಕಾಣಿಸುತ್ತದೆ.
ಬದುಕಿನ ದ್ವಂದ್ವ ಹಾಗೂ ವಾಸ್ತವತೆಯ ನಿಜಸ್ವರೂಪಗಳೆರಡನ್ನೂ ತೀವ್ರಗೊಳ್ಳುವಂತೆ ಕಣವಿಯವರು ಅಭಿವ್ಯಕ್ತಿಸಿದ್ದಾರೆ. ಹಾಗೆಯೇ ಹೊಸ ಕಾವ್ಯದ ಅತಿರೇಕವು ತೀವ್ರ ವಿಡಂಬನೆಗೂ ಒಳಗಾಗಿದೆ. 'ನಂಬಿಕೆ' ಕವಿತೆ ವಿಶಿಷ್ಟ ಸಂವೇದನೆ ಪ್ರಕಟಿಸುತ್ತದೆ. ನಂಬಿಕೆ, ಎನ್ನುವುದು ಅಮೂರ್ತವಾದದ್ದಾದರೂ ಅದು ಮಾನವ ಜೀವನಕ್ಕೆ ಅತ್ಯಗತ್ಯವಾಗಿರುವುದನ್ನು ಈ ಕವಿತೆ ಸೊಗಸಾಗಿ ಚಿತ್ರಿಸಿದೆ.
©2024 Book Brahma Private Limited.