'ನಿನ್ನ ಧ್ಯಾನದ ನೂರೊಂದು ಹಣತೆ’ ವಾಸುದೇವ ನಾಡಿಗ್ ಅವರ ರಚನೆಯ ಕವನಸಂಕಲನವಾಗಿದೆ. ಸಖಿ ಇಲ್ಲದೆ ಕಾಲವು ಚಲಿಸುತ್ತಿಲ್ಲ ಎಂದೆನ್ನು ಹಣತೆ, “ಧ್ಯಾನವೆಂದರೆ ದೇಹವನ್ನು ತ್ಯಜಿಸಿ ಬಂದ ಆತ್ಮದ ತೇರ ಎಳೆತ” ಪ್ರೇಮವೆಂಬುದು ದೇಹಾತೀತವಾದುದು, ಆತ್ಮಗಳ ಒಡನಾಟದ ಚೆಲುವು ಎಂಬುದಾಗಿ ಅರ್ಥೈಸುತ್ತದೆ. ಹೌದಲ್ಲವೇ? ಪ್ರೇಮಕ್ಕೆ ಕಣ್ಣಿಲ್ಲ ಎಂಬು ಕವಿ ಈ ಮೂಲಕ ಇದನ್ನು ನಿರೂಪಿಸುತ್ತಾರೆ. ಪ್ರತಿ ಹಣತೆಯು ಪ್ರೇಮದ ಹೊಸ ವ್ಯಾಖ್ಯಾನದ ಬೆಳಕು ಹೊರ ಸೂಸುತ್ತದೆ. ಪ್ರೇಮವಿಲ್ಲದೆ ಬದುಕಿಲ್ಲ, ಜಗವಿಲ್ಲ ಎಂದು ಗಟ್ಟಿಯಾಗಿ ನಂಬಿರುವ ಒಲವ ಕವಿ ವಾಸುದೇವ ನಾಡಿಗರ “ನಿನ್ನ ಧ್ಯಾನದ ನೂರೊಂದು ಹಣತೆ”ಯ ಮೂಲಕ ನೂರೊಂದು ಅಷ್ಟೇ ಅಲ್ಲ, ಇನ್ನೂ ಅಗಣಿತ ಹಣತೆಗಳ ಬೆಳಗುವ ಕವಿ ಎಂಬುದನ್ನು ಕನ್ನಡ ಸಾಹಿತ್ಯಕ್ಕೆ ತೋರಿದ್ದಾರೆ. ಈ ಹಣತೆಗಳು ಹೀಗೆ ಮತ್ತೆ ಮತ್ತೆ ಬೆಳಗುತ್ತಲಿರಲಿ, ಆ ಬೆಳಕಿನಲ್ಲಿ ನಾವು ಉಸಿರಾಡುತ್ತೇವೆ, ಪ್ರೀತಿಸುತ್ತೇವೆ, ಬದುಕಿನ ಗಮ್ಯತೆಗೊಂದು ದಿವ್ಯತೆಯನು ಆರೋಪಿಸಿಕೊಳ್ಳುತ್ತೇವೆ- ಶ್ರೀನಿವಾಸ ಪಾ ನಾಯ್ಡು.
©2025 Book Brahma Private Limited.