ಸಂಸ್ಕೃತದಲ್ಲಿ ಜಿನಸೇನ ಗುಣಭದ್ರರಿಂದ ರಚಿತವಾದ ಮಹಾಪುರಾಣದ ಸಂಗ್ರಹರೂಪವೇ ಚಾವುಂಡರಾಯನಿಂದ ರಚನೆಗೊಂಡ ಕನ್ನಡ ಮಹಾಪುರಾಣ. ರೂಢಿಯಲ್ಲಿ ಚಾವುಂಡರಾಯ ಪುರಾಣವೆಂದು ಇದು ಪ್ರಖ್ಯಾತಿಯಾಗಿದೆ. ಚಾವುಂಡರಾಯ ತನಗಿಂತ ಪೂರ್ವದಲ್ಲಿದ್ದ ಈ ಮಹಾಪುರಾಣಕಾರರಿಂದ ಪ್ರಭಾವಗೊಂಡು ತನಗೆ ಆಧಾರವಾದ ಮಹಾಪುರಾಣಗಳು ಸಂಸ್ಕೃತ ಪದ್ಯರೂಪದಲ್ಲಿದ್ದರೂ, ಕನ್ನಡ ಗದ್ಯದಲ್ಲಿ ಇವರು ಸಂಗ್ರಹಿಸಿದ್ದಾರೆ. ತೀರ್ಥಂಕರರ ಪುರಾಣದ ಮೊದಲು ಆ ತೀರ್ಥಂಕರರನ್ನು ಸ್ತುತಿಸುವ ಕಂದಪದ್ಯಗಳಿರುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.
©2024 Book Brahma Private Limited.