ಕನ್ನಡ ನಾಡು-ನುಡಿ ಚಿಂತಕರಾದ ಎಂ.ಎ. ರಾಮಾನುಜಯ್ಯಂಗಾರ್ಯ ಹಾಗೂ ಎಸ್.ಜಿ. ನರಸಿಂಹಾಚಾರ್ ಅವರು ಸಂಯುಕ್ತವಾಗಿ ಬರೆದ ಕೃತಿ -ಅಂಡಯ್ಯ ಮಹಾಕವಿ ಪ್ರಣೀತ ಕಬ್ಬಿಗರ ಕಾವಂ. 1883 ಹಾಗೂ 1886 ಹೀಗೆ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಮುದ್ರಣದ ನಂತರ ಇದೀಗ 3ನೇ ಮುದ್ರಣ ಕಾಣುತ್ತಿದೆ. ಕರ್ಣಾಟಕ ಕಾವ್ಯಮಂಜರಿಯಲ್ಲಿ ಈ ಕೃತಿಯು ಪ್ರಕಟಗೊಂಡಿದೆ. ಸಂಸ್ಕೃತ ಪದಗಳ ಮಿಶ್ರವಿಲ್ಲದೆ ದೇಶೀ ಪದಗಳಿಂದ ರಚಿತವಾದ ಕೃತಿ ಇದು. ಆದ್ದರಿಂದ ಈ ಸಾಹಿತ್ಯವನ್ನು ಕಬ್ಬಿಗರ ಕಾವಂ, ಮದನ ವಿಜಯ, ಕಾವನ ಗೆಲ್ಲ, ಸೊಬಗಿನ ಸುಗ್ಗಿ ಎಂಬ ಹೆಸರುಗಳುಂಟು. ಅಂಡಯ್ಯ ಕವಿಯ ನಾಡು, ಕವಿಗೆ ರಾಜಾಶ್ರಯವಿತ್ತೆ?, ಕಬ್ಬಿಗರ ಕಾವಂ ಎಂಬುದು ಕವಿಯ ಹೆಸರೇ ಇಲ್ಲವೇ ಗ್ರಂಥದ ಹೆಸರೇ?, ಹೀಗೆ ಜಿಜ್ಞಾಸೆಯೊಂದಿಗೆ ಆತನ ಕಾವ್ಯವನ್ನು ವಿಶ್ಲೇಷಿಸಲಾಗಿದೆ.
©2024 Book Brahma Private Limited.