ಹಿರಿಯ ಕವಿ ಚೆನ್ನವೀರ ಕಣವಿಯವರ 16ನೆಯ ಸಂಕಲನ ’ನೀವೇ ಪ್ರಮಾಣು’. ಈ ಸಂಕಲನದಲ್ಲಿ 80 ಕವಿತೆಗಳಿವೆ. 20ನೆಯ ಶತಮಾನದ ಎಲ್ಲ ಸಾಹಿತ್ಯ ಚಳುವಳಿಗೆ ಸ್ಪಂದಿಸುತ್ತ ಬಂದ ಹಿರಿಯ ಜೀವ ಕಣವಿ. ಪರಂಪರೆ ಮತ್ತು ಪ್ರಗತಿಗಳೆರಡರಲ್ಲೂ ಆಸಕ್ತಿ ಹೊಂದಿರುವ ತಮ್ಮ ಎಲ್ಲ ಕವಿತೆಗಳಲ್ಲಿ ಆ ಗುಣ ಕಾಯ್ದುಕೊಂಡು ಬಂದಿದ್ದಾರೆ.
ಈ ಸಂಕಲನದಲ್ಲಿ ಕಣವಿಯವರು ಒಂಬತ್ತು ಗೇಯ ಕವಿತೆಗಳು, ಇಪ್ಪತ್ನಾಲ್ಕು ಬಿಡಿಗವನಗಳು, ಹದಿನೈದು ಅನುವಾದಿತ ಕವಿತೆಗಳಿವೆ. ಈ ಸಂಕಲನದ ಕವನಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಕವಿತೆಗಳು ಸುನೀತಗಳು ಎಂಬುದು ವಿಶೇಷ. ಸುನೀತಗಳಲ್ಲಿ ಸಾಹಿತಿ, ಸಂಗೀತ, ಕಾವ್ಯ-ಕಲಾವಿದರನ್ನು ಮೆಚ್ಚಿ ಬರೆದ ವ್ಯಕ್ತಿಗೀತಗಳು ಗಮನ ಸೆಳೆಯುತ್ತವೆ.
©2024 Book Brahma Private Limited.