ಹುಲಕುಂಟೆಮಠ ಶಿಮಮೂರ್ತಿ ಶಾಸ್ತ್ರಿ ಶಿವಪ್ರಕಾಶ್” ರವರು ಒಬ್ಬ ಪ್ರಮುಖ ಕವಿ ಮತ್ತು ನಾಟಕಕಾರ. ಇವರು ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಕಲಾ ಮತ್ತು ಸೌಂದರ್ಯ ಶಾಸ್ತ್ರ ಶಾಲೆಯಲ್ಲಿ ಪ್ರಾಧ್ಯಾಪರಾಗಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದ ಆಳವಾದ ಅಧ್ಯಯನ ನಡೆಸಿ, ಕಾವ್ಯದ ಸೂಕ್ಷ್ಮತೆಗಳನ್ನು ಮೈಗೂಡಿಸಿಕೊಂಡವರು. ನವೋದಯ, ಪ್ರಗತಿಶೀಲ, ಮತ್ತು ದಲಿತ ಬಂಡಾಯ ಹೀಗೆ ಎಲ್ಲಾ ರೀತಿಯ ವಿಶಿಷ್ಟ ಸಂವೇದನೆಗಳನ್ನು ತಮ್ಮ ಕವಿತೆಗಳಲ್ಲಿ ರೂಢಿಸಿಕೊಂಡವರು. ವಿಶಿಷ್ಟ, ವಿಭಿನ್ನ ರೀತಿಯ ಮನೋಧರ್ಮ, ಭಾಷಶಕ್ತಿ, ನಿರ್ಮಾಣ ಕೌಶಲ್ಯ, ಹಾಗೂ ಚಿಂತನೆ ಶೀಲತೆಗಳನ್ನು ಅತ್ಯಂತ ಸುಂದರಾವಾಗಿ, ಪರಿಣಾಮಕಾರಿಯಾಗಿ ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.