ನಡುಗನ್ನಡ ಸಾಹಿತ್ಯದಲ್ಲಿ ಪ್ರಮುಖ ಹೆಸರು ರಾಘವಾಂಕನದು. ತನ್ನ ’ಹರಿಶ್ಚಂದ್ರ ಕಾವ್ಯ’ದ ಮೂಲಕ ಕನ್ನಡಿಗಿರುವ ಮಾತಾಗಿರುವ ರಾಘವಾಂಕನ ಕಾವ್ಯ ಕೌಶಲ ಗಮನ ಸೆಳೆಯುವಂತಹದ್ದು. ಆರು ಸಾಲಿನ ಪದ್ಯಗಳ ಛಂದಸ್ಸಿನಲ್ಲಿ ಬರೆಯುವ ರಾಘವಾಂಕ ಷಟ್ಪದಿಯ ಕವಿ ಎಂದೇ ಚಿರಪರಿಚಿತ.
ಹಂಪೆಯ ನಿವಾಸಿ ಕವಿ ಹರಿಹರನ ಶಿಷ್ಯನಾಗಿದ್ದ ರಾಘವಾಂಕನ ಮೇರು ಕೃತಿ ’ಹರಿಶ್ಚಂದ್ರ ಕಾವ್ಯ’. ಹರಿಶ್ಚಂದ್ರ ಕಾವ್ಯವನ್ನು ಹೇಗೆ ಪ್ರವೇಶಿಸಬೇಕು- ಓದಿನ ಕ್ರಮ- ಅರ್ಥೈಸಿಕೊಳ್ಳುವ ವಿಧಾನವನ್ನು ಜಿ.ಎಸ್. ಭಟ್ಟ ಅವರು ಈ ಪುಸ್ತಕದಲ್ಲಿ ಮಾಡಿದ್ದಾರೆ.
©2024 Book Brahma Private Limited.