’ಆದಿಪುರಾಣ’ವು ಮೇಲ್ನೋಟಕ್ಕೆ ಜೈನರಿಗೆ ಸೇರಿದ ಧರ್ಮ ಗ್ರಂಥವಾದರೂ ವಾಸ್ತವವಾಗಿ ಅದು ಬದುಕಿನ ಹುಡುಕಾಟವಾಗಿದೆ. ಮನುಷ್ಯಕುಲದ ಇತಿವೃತ್ತವನ್ನೇ ಅದು ಒಳಗೊಂಡಿದೆ. ಆದಿಪುರಾಣದ ಆರಂಭದಲ್ಲಿ ಮಾನವ ಸಂಕುಲವು ತನ್ನ ಅಸ್ತಿತ್ವದ ಆದಿಮ ಹಂತದಲ್ಲಿ ಪ್ರಕೃತಿಯೊಡನೆ ಹೊಂದಿಕೊಳ್ಳುವ ರೀತಿಯ ಕುರಿತ ಬಣ್ಣನೆಯಿದೆ. ನಂತರ ಹಂತದಲ್ಲಿ ಮಾನವರು ಎದುರಿಸುವ ಬದುಕಿನ ನಿತ್ಯನಿಗೂಢಗಳು ಹಾಗೂ ಇರುವಿಕೆಯ ಸಾರ್ಥಕತೆಯ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪರಿಯನ್ನು ವಿವರಿಸುತ್ತದೆ.
©2025 Book Brahma Private Limited.