ಕಣವಿಯವರ ಪರಿಸರ ಪ್ರೀತಿ-ಪ್ರಜ್ಞೆಯನ್ನು ಬಿಂಬಿಸುವ ಕವಿತೆಗಳಿರುವ ಸಂಕಲನ ಜೀನಿಯಾ. 1989ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದ ಈ ಸಂಕಲನಲ್ಲಿ 33 ಕವಿತೆಗಳಿವೆ.
ಸುಂದರ ಪ್ರಕೃತಿಯ ವಿನಾಶ ಮಾನವ ಕುಲ ತತ್ತರಿಸುವಂತೆ ಮಾಡುವುದನ್ನು ಕವಿತೆಯು ಸೊಗಸಾಗಿ ಚಿತ್ರಿಸಿದೆ.
ಕಾಯಲಾರದೆ ಮನುಷ್ಯ ಕೊಡಲಿಯೆತ್ತುತ್ತಾನೆ
ಮಾಯಲಾರದ ಗಾಯ ಭವಿಷ್ಯಕ್ಕೆ, ಭೂತಕ್ಕೆ ಬಲಿ?
ಕವಿ ಭವಿಷ್ಯದ ಚಿಂತಕನಾಗಿ, ಮಾನವ ಕಲ್ಯಾಣದ ಸದಾಶಯ ಬಯಸುತ್ತಾರೆ. ನಿಸರ್ಗದ ವಿನಾಶದ ವಿರುದ್ಧ ದನಿ ಎತ್ತುತ್ತಲೇ
ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಎಂದು ನಮ್ಮ ಮನಸ್ಸನ್ನು ಹೊಸ ಸಂವೇದನೆಯತ್ತ ಕರೆದೊಯ್ಯುತ್ತಾರೆ.
©2025 Book Brahma Private Limited.