ಹೊಸಗನ್ನಡ ಗದ್ಯ ಸಾಹಿತ್ಯದ ಅರುಣೋದಯ ಕಾಲದಲ್ಲಿ ಪ್ರಮುಖ ಕೃತಿಯಾಗಿ ಹೊರಹೊಮ್ಮಿದ ಅನನ್ಯ, ಅನರ್ಘ್ಯ ಕೃತಿ ಕೆಂಪುನಾರಾಯಣನ ರಚಿಸಿದ ಮುದ್ರಾಮಂಜೂಷ. 1893ರಲ್ಲಿ ರಚಿತವಾದರೂ ಐದು ದಶಕಗಳ ತರುವಾಯ ಬಾಸೆಲ್ ಮಿಷನರಿ ಸಂಸ್ಥೆಯಿಂದ ಪ್ರಕಟಣೆಗೊಂಡ ಈ ಕೃತಿ ನಂತರದಲ್ಲೂ ಗದ್ಯದ ಭಾಷೆ ಶೈಲಿಗಳಲ್ಲಿ ಉಂಟಾಗುತ್ತಿದ್ದ ಸ್ಥಿತ್ಯಂತರಗಳ ಕಾರಣಕ್ಕೆ ಹಲವು ಭಾರಿ ತಿದ್ದುಪಡಿಗೆ ಒಳಗಾಗುತ್ತಲೇ ಬಂದಿದೆ. ನಿರಂತರ ತಿದ್ದುಪಡಿಗೆ ಒಳಗಾದ ಕಾರಣ ಇದು ಕವಿಲಿಖಿತ ಮೂಲ ರೂಪದಿಂದ ದೂರ ಸರಿಯುತ್ತಾ ಸಾಗಿರುವುದು ದುರಂತ. ಆದರೆ ಈ ಕೃತಿಯಲ್ಲಿ ವೆಂಕಟಾಚಲಶಾಸ್ತ್ರಿಯವರು ಲಭ್ಯವಿದ್ದ ಮೂಲ ತಾಳೆಯೋಲೆ ಪ್ರತಿ, ಕಾಗದ ಪ್ರತಿ ಮತ್ತು ಮುದ್ರಿತ ಪರಿಷ್ಕರಣಗಳನ್ನು ಆಧಾರವಾಗಿಟ್ಟುಕೊಂಡು ಮೂಲಕೃತಿಗೆ ಹೆಚ್ಚೇನು ಅರ್ಥ ವ್ಯತ್ಯಾಸ ಕಾಣದ ರೀತಿಯಲ್ಲಿ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಈ ಕೃತಿಯನ್ನು ರಚಿಸಿದ್ದಾರೆ.
©2024 Book Brahma Private Limited.