ಕಣವಿಯವರ ನವಿರಾದ ಪ್ರೇಮ ಭಾವನೆಗಳನ್ನು ಅನಾವರಣ ಮಾಡುವ ಸಂಕಲನವಿದು. ಈ ಸಂಕಲನದಲ್ಲಿ ಒಟ್ಟು 34ಕವಿತೆಗಳಿವೆ.
ಬಾ ಮಲ್ಲಿಗೆ
ಬಾ ಮೆಲ್ಲಗೆ
ನನ್ನೆದೆ ಮೆಲ್ವಾಸಿಗೆ
ಇಳೆಗಿಳಿದಿದೆ
ಬೆಳದಿಂಗಳು
ನನ್ನೊಲುಮೆಯ ಕರೆಗೆ
ಎನ್ನುವ ಕವಿ ಒಲವು ಬಳ್ಳಿಯಾಗಿ ಬೆಳೆದು ಚೆಂಗುಲಾಬಿಯಂತೆ ಅರಳುವದನ್ನು ಸೂಚಿಸುತ್ತಾರೆ.
’ಮುಂದೆ ಬಹುದ ಕಂಡರಾರು, ಇಂದು ಜೀವ ಕುಣಿಯಲಿ’ ಎನ್ನುವ ಕಣವಿಯವರು 'ಪ್ರೀತಿಯೊಂದೆ ನಮ್ಮ ನೀತಿ' ಎಂದು ಕಣವಿಯವರು ಹಾಡಿದ್ದಾರೆ.
ಹೆಣ್ಣು ಗಂಡಿನ ಪ್ರೀತಿ ಕ್ಷಣಿಕವಾದದ್ದಲ್ಲ. ಅದು ಜನ್ಮಾಂತರದ ಸಂಬಂಧವೆಂಬುದನ್ನು'ಜೀವ ಜೀವಾಳದಲಿ ಕೂಡಿದವಳು' ಕವಿತೆಯಲ್ಲಿ’ ಕಣವಿಯವರು ವ್ಯಕ್ತಪಡಿಸಿದ್ದಾರೆ .
©2025 Book Brahma Private Limited.