ಹಿರಿಯ ಕವಿ ಚೆನ್ನವೀರ ಕಣವಿಯವರ ಎರಡನೆಯ ಪ್ರಕಟಿತ ಕಾವ್ಯ ಕೃತಿ. ’ಕಾವ್ಯಾಕ್ಷಿ’ ಮೂಲಕ 1949ರಲ್ಲಿ ಕಾವ್ಯಲೋಕ ಪ್ರವೇಶಿಸಿದ ಕಣವಿಯವರು ಅದರು ಮರುವರ್ಷವೇ ’ಭಾವಜೀವಿ’ ಎನ್ನುವ ಕಾವ್ಯ ಪ್ರಕಟಿಸಿದರು. ’ಭಾವಜೀವಿ’ ಕಾವ್ಯವು ಚೌಪದಿಯಲ್ಲಿದೆ. ಒಟ್ಟು580 ಸಾಲುಗಳಿವೆ. ಕವಿಯ ಮನದಾಳದ ಭಾವಗಳು ಕಾವ್ಯವಾಗಿ ರೂಪು ತಳೆದಿದೆ. ಇದನ್ನು ಆತ್ಮಕಥನಾತ್ಮಕ ಕವಿತೆ ಎಂದು ಪರಿಗಣಿಸಬಹುದು. ಕವಿಯ ಭಾವನೆಗಳು ರೂಪುಗೊಂಡ ರೀತಿಯನ್ನು ಅನಾವರಣಗೊಳಿಸುತ್ತದೆ. ಬಾಲ್ಯದ ನೆನಪುಗಳು, ಅದರ ಹಿನ್ನೆಲೆಯಲ್ಲಿ ರೂಪುಗೊಂಡ ಅನುಭವಗಳನ್ನು ಕವಿ ಇಲ್ಲಿ ದಾಖಲಿಸಿದ್ದಾರೆ. ಇಲ್ಲಿ ಕವಿಯೇ ಭಾವಜೀವಿಯೂ ಹೌದು.
©2025 Book Brahma Private Limited.