ಭರತೇಶ ವೈಭವದ ಶೋಭನ ಸಂಧಿಗಳು-ಮಿರ್ಜಿ ಅಣ್ಣಾರಾಯರು ಬರೆದ ವಿದ್ವತ್ ಪೂರ್ಣ ಚರಿತ್ರೆ. ಕವಿ ರತ್ನಾಕರ ವರ್ಣಿಯು ಭೋಗವಿಜಯ, ದಿಗ್ವಿಜಯ, ಯೋಗ ವಿಜಯ, ಮೋಕ್ಷವಿಜಯ ಹಾಗೂ ಅರ್ಕಕೀರ್ತಿವಿಜಯ ಎಂದು ವಿಭಾಗಿಸಿ ಭರತೇಶನ ವೈಭವವನ್ನು ವರ್ಣಿಸಿದ್ದಾನೆ. ಭೋಗವಿಜಯದ ಆರಂಭದ ಸಂಧಿಗಳಿಗೆ ಶೋಭನ ಸಂಧಿಗಳು ಎನ್ನುತ್ತಾರೆ. ಕವಿಯು ಭೋಗ-ಯೋಗ ಎರಡರ ಸಮನ್ವಯವನ್ನು ಈ ಮಹಾಕಾವ್ಯದಲ್ಲಿ ಕಾಣಬಹುದು ಎಂದು ಲೇಖಕ ಮಿರ್ಜಿ ಅಣ್ಣಾರಾಯರು ತಾವು ಸಂಪಾದಿಸಿದ ಈ ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೃತಿಯಲ್ಲಿ ಶೋಭನಸಂಧಿಗಳು ಹಾಗೂ ಪೀಠಿಕೆ, ಪ್ರಥಮ ಕಲ್ಯಾಣದ ಶೋಭನ ಸಂಧಿ, ಮಧ್ಯ ಮಂಗಲದ ಶೋಭನ ಸಂಧಿ, ಕಲ್ಯಾಣದ ಶೋಭನ ಸಂಧಿ, ಧವಲ ಶೋಭನ, ಅಂತ್ಯ ಮಂಗಲ ಕಲ್ಯಾಣ ಸಂಧಿ -ಈ ಶೀರ್ಷಿಕೆಗಳಡಿ ಕಾವ್ಯಗಳನ್ನು ಸಂಪಾದಿಸಲಾಗಿದೆ. ಕೊನೆಯಲ್ಲಿ ಶಬ್ದಕೋಶ ನೀಡಿದ್ದು, ಮಹಾಕಾವ್ಯವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗಿದೆ.
©2024 Book Brahma Private Limited.