ಬಯಲಿಗೂ ಗೋಡೆಗಳು

Author : ಸೌಮ್ಯ ಕೆ.ಆರ್.

Pages 104

₹ 100.00




Year of Publication: 2017
Published by: ಪ್ರಬುದ್ಧ ಪ್ರಕಾಶನ
Phone: 9986044233

Synopsys

ಸೌಮ್ಯಾ ಅವರ ಅಭಿವ್ಯಕ್ತಿಯಲ್ಲಿ ಬದುಕಿನ ಕಂಡುಂಡ ಅನುಭವಗಳು ಈ ಸಂಕಲನದಲ್ಲಿ ಮಡುಗಟ್ಟಿವೆ. ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುತ್ತಿರುವ ಈ ಕವಯತ್ರಿಯು ಎರಡನೆಯ ಸಂಕಲನ ಇದು. ಇವರ ಮೊದಲ ಸಂಕಲನ 'ಬೆಂಕಿಯಲ್ಲೂ ಬಾಡದ ಹೂವು' ಕನ್ನಡ ಪುಸ್ತಕ ಪ್ರಾಧಿಕಾರದ ಮೆಚ್ಚುಗೆಗೆ ಪಾತ್ರವಾಗಿತ್ತು. ಎರಡನೆ ಕವನ ಸಂಕಲನ 'ಬಯಲಿಗೂ ಗೋಡೆಗಳು'ದಲ್ಲಿ ಒಟ್ಟು 50 ಕವಿತೆಗಳಿವೆ.

ಹಿರಿಯ ಲೇಖಕಿ ಕೆ. ಷರೀಫಾ ಅವರು ’ಬದುಕು ಬವಣಿಗಳ ಮಧ್ಯೆ ಸುಟ್ಟು ಹೋಗದೆ ಫಿನಿಕ್ಸ್ ಹಕ್ಕಿಯಂತೆ ಕ್ರಿಯಾಶೀಲವಾಗುವುದೇ ಅವರ ವಿಶೇಷತೆ. ಈ ಕವಿತೆಗಳು ವಿಕೃತ ವ್ಯವಸ್ಥೆಯಲ್ಲಿನ ಅಸಮಾನತೆಯ ಗೋಡೆಗಳನ್ನು ಕೆಡವಿ, ಸ್ವಸ್ಥ ಸಮಾಣವನ್ನು ಕಟ್ಟುವ ಕನಸು ಕಾಣುತ್ತಿವೆ’ ಎಂದಿದ್ದಾರೆ.

ಕವಿತೆಯ ಸಾಲೊಂದು ಹೀಗಿದೆ-

ಹಕ್ಕಲು ಇದ್ದ ಹೊಲವು

ಇಷ್ಟವಿರದ ಒಡಲು ಬರಡಲ್ಲದೆ

ಅಲ್ಲಮನ ಬಯಲಾಗಲುಂಟೆ

ಹೇಳಾ

About the Author

ಸೌಮ್ಯ ಕೆ.ಆರ್.
(20 June 1983)

ಕವಯಿತ್ರಿ ಸೌಮ್ಯ ಕೆ.ಅರ್. ಅವರು ಬೆಂಗಳೂರಿನ ಸೆಂಟರ್ ಫಾರ್ ಸೋಷಿಯಲ್ ಡೆವಲೆಪ್ ಮೆಂಟ್ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ. 1983ರ ಜೂನ್ 20ರಂದು ಜನಿಸಿದ ಅವರು ರಾಮನಗರ ಜಿಲ್ಲೆಯ ಕನಕಪುರದವರು. ಬೆಂಗಳೂರು ವಿಶ್ವವಿದ್ಯಾಲಯದ ಪದವೀದರರು.  ಕನಕಪುರದ ಪ್ರಬುದ್ಧ ಪ್ರಕಾಶನವು ಸೌಮ್ಯ ಅವರ ಎರಡು ಸಂಕಲನಗಳನ್ನು ಪ್ರಕಟಿಸಿದೆ.’ಬೆಂಕಿಯಲ್ಲೂ ಬಾಡದ ಹೂ’, ’ಬಯಲಿಗೂ ಗೋಡೆಗಳು’ ಸೌಮ್ಯ ಅವರ ಸಂಕಲನಗಳು. ಚಾಮರಾಜನಗರದ ರಂಗವಾಹಿನಿ ನೀಡುವ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಯು ಸೌಮ್ಯ ಅವರ ’ಬಯಲಿಗೂ ಗೋಡೆಗಳು’ ಸಂಕಲನಕ್ಕೆ ಸಂದಿದೆ. ...

READ MORE

Related Books