‘ಲಕ್ಷ್ಮೀಶನ ವಚನ ಜೈಮಿನಿಭಾರತ’ ಸಮಗ್ರ ಗದ್ಯಾನುವಾದವನ್ನು ಲೇಖಕ ಹೆಚ್. ಸಿದ್ದಲಿಂಗಯ್ಯ ರಚಿಸಿದ್ದಾರೆ. 'ಜೈಮಿನಿ ಭಾರತ ಕನ್ನಡ ಕಾವ್ಯಲೋಕದ ಮಹತ್ವಪೂರ್ಣ ಕೃತಿ. ಇದನ್ನು ರಚಿಸಿದ ಲಕ್ಷ್ಮೀಶ ಕವಿಯು ಕರ್ಣಾಟ ಚೂತವನ ಚೈತ್ರನೂ ಹೌದು; ಚೈತ್ರವನಚೂತನೂ ಹೌದು! - 'ಕಥೆಯೊಳಗೆ ಕಥೆ ಹೇಳುವ ತಂತ್ರದಿಂದ ಸಾಗುವ ಈ ಭಾರತ ಕಾವ್ಯದೊಳಗೆ ರಾಮಾಯಣದ ಸೀತಾ ಪರಿತ್ಯಾಗವೂ ಸ್ಥಾನ ಪಡೆಯುತ್ತದೆ. ಇದು ಕಾವ್ಯಶರೀರದೊಳಗೆ ಮೈವೆತ್ತುನಿಂತ ಮಹೋಪಮೆಯೇ ಸರಿ! ಉಳಿದಂತೆ ಚಂದ್ರಹಾಸಚರಿತ್ರೆ, ಮಯೂರಧ್ವಜ ವೃತ್ತಾಂತ, ಬಬ್ರುವಾಹನ ಕಾಳಗ, ಸುಧನ್ವಮೋಕ್ಷ ಒಂದೊಂದೂ ಭಕ್ತಿ, ವೀರ, ಶೃಂಗಾರಗಳ ರಸಸೋತ! ಭಾಷೆ, ಬಂಧ, ಅಲಂಕಾರ, ಧ್ವನಿಗಳೇ ಮುಂತಾದ ಕಮನೀಯತೆಗಳಿಂದ ಕಂಗೊಳಿಸುವ ಕೆನೆವಾಲು ಕಡೆದ ನವನೀತ! ಪ್ರಸ್ತುತ ಸಿದ್ದಲಿಂಗಯ್ಯ ಅವರು ರಚಿಸಿರುವ ಜೈಮಿನಿಭಾರತದ ಗದ್ಯಾನುವಾದವು ಕಾವ್ಯಾಭ್ಯಾಸಿಗಳಿಗೆ ಒಂದು ಕೈದೀವಿಗೆ, ವಿದ್ಯಾರ್ಥಿಗಳಿಗೆ ಎಂತೋ ಅಂತೆಯೇ ವಿದ್ವಾಂಸರಿಗೂ ನೆರವಾಗಬಲ್ಲ ಒಂದು ಸಾರ್ಥಕ ಪ್ರಯತ್ನ ಎನ್ನುತ್ತಾರೆ ಕೃತಿಗೆ ಬೆನ್ನುಡಿ ಬರೆದಿರುವ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು.
©2025 Book Brahma Private Limited.