ವಿವೇಕ ಚಿಂತಾಮಣಿ ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾದ ಇದು ಅದ್ಭುತ ವಿಶ್ವಕೋಶವಾಗಿದೆ. ಕೊಳ್ಳೆಗಾಲ ತಾಲ್ಲೂಕಿನ ಚಿಲಕವಾಡಿ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ಗುಹೆಯಲ್ಲಿ ವಾಸಮಾಡಿ ತಪೋಗೈದು ವೇದ, ಆಗಮ, ಪುರಾಣಾದಿ ಅನೇಕ ಶಾಸ್ತ್ರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ನಿಜಗುಣ ಶಿವಯೋಗಿಗಳ ಷಟ್ ಶಾಸ್ತ್ರದ ಬಹುಮುಖ್ಯ ಕೃತಿಯಾಗಿದೆ. ಕನ್ನಡದಲ್ಲಿ ಗದ್ಯಶೈಲಿ ತನ್ನದೇ ಆದ ರೀತಿಯಲ್ಲಿ ಸ್ವತಂತ್ರವಾಗಿ ಬೆಳೆಯುವಲ್ಲಿ ಈ ಗ್ರಂಥ ದ ಕೊಡುಗೆ ಅನನ್ಯ , ಅಪಾರ. ಹತ್ತು ಪರಿಚ್ಛೇಧಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ವೇದಾದಿ ಸಕಲ ಶಾಸ್ತ್ರಾರ್ಥ, ವೇದ ಉಪನಿಷತ್ ವರ್ಣಾಶ್ರಮ, ಪಂಚಾವಸ್ಥೆ, ಶೈವ ಸಿದ್ಧಾಂತ. ಶುದ್ಧಾಧ್ವೈತ, ರಾಜನ ಆಸ್ಥಾನ ರಾಜಸಭೆ ಸಂಗೀತ, ನೃತ್ಯ ಇತ್ಯಾದಿ ಲೌಕಿಕ ವಿಷಯಗಳು, ಸಪ್ತದ್ವೀಪಗಳು, ಭೂಲೋಕದ ಯೋಜನಾ ಸಂಖ್ಯೆ, ಪಂಚಭೂತ, ಕಾಲಸ್ವರೂಪದ ಭೇದಗಳು ಇತ್ಯಾದಿ ಅಂಶಗಳನ್ನು ವಿವರಿಸಲಾಗಿದೆ. ಮೂಲಕೃತಿಯಷ್ಟೇ ಪ್ರಖರವಾಗಿ ವಿಶ್ಲೇಷಣೆ, ವಿವರಣೆ ಸಹಿತ ಶಿವಲಿಂಗಯ್ಯ ಜಿ.ಎ.ಯವರು ಈ ಕೃತಿಯನ್ನು ರಚಿಸಿದ್ದಾರೆ.
©2025 Book Brahma Private Limited.