ವಿಕ್ರಮಾಜನ ವಿಜಯಂ ಎಂಬ ಪಂಪಭಾರತವು ಆದಿ ಕವಿ ಪಂಪ ಬರೆದ ಎರಡನೇ ಮಹಾಕಾವ್ಯ. ಈ ಗ್ರಂಥಕ್ಕೆ ರಾಜ್ಯಾದಂತ ನೂರಾರು ವಿಧ್ವಾಂಸರು ನಿತ್ಯವೂ ಆವೇಶದಿಂದ (ನಿತ್ಯವೂ ಭಕ್ತರಂತೆ) ನಡೆದುಕೊಳ್ಳುತ್ತಾರೆ. ಕನ್ನಡ ಸಾಹಿತ್ಯದಲ್ಲಿ ಈ ಕೃತಿಯೂ ಪ್ರಾಮುಖ್ಯತೆ ಪಡೆಯೂದರೊಂದಿಗೆ ಶ್ರೇಷ್ಠ ಕೃತಿಯಾಗಿ ಹೊರಹೊಮ್ಮಿದೆ. ಆದರೆ ಇದು ಹಳೆಗನ್ನಡದಲ್ಲಿರುವುದರಿಂದ, ಇತ್ತೀಚೆಗೆ ಹಳೆಗನ್ನಡ ಅಧ್ಯಯನ ಮತ್ತು ಬಳಕೆ ಕಡಿಮೆಯಾಗುತ್ತಿರುವುದರಿಂದ ಹಳೆಗನ್ನಡದ ಪರಿಚಯವಿಲ್ಲದ ಆಧುನಿಕ ಓದುಗರಿಗೆ ಇದರ ಪ್ರತಿಫಲ ಸಿಗುವುದಿಲ್ಲ. ಹಳೆಗನ್ನಡದ ಬಗ್ಗೆ ಓದುಗರಿಗೆ ಇದ್ದ ಕೊರಗನ್ನು ಎಚ್.ವಿ.ಶ್ರೀನಿವಾಸ್ ಶರ್ಮ ರು ಈ ಕೃತಿಯ ಮೂಲಕ ನೀಗಿಸಲು ಪ್ರಯತ್ನಿಸಿದ್ದಾರೆ. ಹಿರಿಯ ವಿಧ್ವಾಂಸ ಮತ್ತು ಉತ್ತಮ ಪ್ರಾಧ್ಯಾಪಕರೂ ಆದ ಶ್ರೀನಿವಾಸ ಶರ್ಮರು ಪಂಪನ ಮೂಲ ಆಶಯಕ್ಕೆ ಬದ್ಧವಾಗಿಯೇ ವಿಕ್ರಮಾರ್ಜುನ ವಿಜಯಂ ಕಥಾನಕವನ್ನು ಕನ್ನಡಕ್ಕೆ ಗದ್ಯಾನುವಾದ ಮಾಡಿ ಇದನ್ನು ಸಾಮಾನ್ಯ ಓದುಗನಿಗೂ ಸಿಗುವಂತೆ ಮಾಡಿದ್ದಾರೆ.
©2024 Book Brahma Private Limited.