ಹದಿನೈದನೆಯ ಸಂಕಲನ ’ಬರೆದು ತೀರದ ಬದುಕು’. 2000ರಲ್ಲಿ ಪ್ರಕಟವಾದ ಈ ಸಂಕಲನದಲ್ಲಿ 54 ಕವಿತೆಗಳಿವೆ. ತಳುಕಿನ ವೆಂಕಣ್ಣಯ್ಯ ಗ್ರಂಥಮಾಲೆಯ ಚಿನ್ನದ ಹಬ್ಬ ಪುಸ್ತಕ ಮಾಲೆಯಲ್ಲಿ ಪ್ರಕಟವಾಗಿದೆ.
ಅರ್ಥಪೂರ್ಣ ಶೀರ್ಷಿಕೆಯ ವಿಶಿಷ್ಟ ಸಂಕಲನ. ನವೋದಯ, ನವ್ಯ, ನವ್ಯೋತ್ತರ ಕಾವ್ಯ ಮಾರ್ಗದಲ್ಲಿ ಸಾಗಿ ಬಂದ ಕಣವಿಯವರು ಬದುಕಿನ ಬಗೆಗೆ ಗಾಢವಾದ ಪ್ರೀತಿ ಇಟ್ಟುಕೊಂಡವರು. ಸ್ನೇಹಿ-ಪ್ರೀತಿ- ಸಜ್ಜನಿಕೆಗೆ ಹೆಸರಾದ ಕಣವಿಯವರ ಕವಿತೆಗಳಲ್ಲಿ ಸುನೀತಗಳಿಗೆ ವಿಶೇಷ ಸ್ಥಾನವಿದೆ. ಈ ಸಂಕಲನದಲ್ಲಿಯೂ ಸುನೀತಗಳ ಸೌಂದರ್ಯ ಎದ್ದು ಕಾಣಿಸುತ್ತದೆ.
©2024 Book Brahma Private Limited.