ಕನ್ನಡದ ಶತಕ ಪ್ರಕಾರದ ಸಾಹಿತ್ಯದಲ್ಲಿ ಸೋಮೇಶ್ವರ ಶತಕಂ ಒಂದು ಜನಪ್ರಿಯ ಪ್ರಾಚೀನ ಕೃತಿ. 105 ಪದ್ಯಗಳಿರುವ ಮೂಲ ಕೃತಿಯಲ್ಲಿ ಲೋಕನೀತಿ, ಸಜ್ಜನನೀತಿ, ಆಡಳಿತ ನೀತಿ, ಬಂಧುನೀತಿ ಇತ್ಯಾದಿ ತಮ್ಮ ಅಸ್ತಿತ್ವವನ್ನು ಖಚಿತ ಪಡಿಸುತ್ತದೆ. ಇದನ್ನು ಧಾರ್ಮಿಕ ಶತಕಗಳ ಗುಂಪಿಗೆ ಸೇರಿಸಬಹುದಾದರೂ ಈ ನೀತಿಶತಕಗಳ ಸಾಲಿನಲ್ಲೂ ಪ್ರಮುಖ ಸ್ಥಾನವನ್ನು ಪಡೆದಿದೆ. ಮೂಲ ಕೃತಿಯ ಪದ್ಯಗಳನ್ನು, ಅವುಗಳ ಪದವತ್ತಾದ ಅರ್ಥಗಳನ್ನು ಮತ್ತು ಆ ಪದ್ಯದ ಸಮಗ್ರ ಗದ್ಯಾನುವಾದವನ್ನೂ ವರ್ಗೀಕರಿಸಿ ಲೇಖಕಿ ಡಾ. ಅಕ್ಕಾಮಹಾದೇವಿಯವರು ಈ ಕೃತಿಯ ಮೂಲಕ ಓದುಗರಿಗೆ ವಿವರಣೆಯನ್ನು ಒದಗಿಸಿದ್ದಾರೆ.
©2024 Book Brahma Private Limited.