ಮುದ್ದಣ ಕವಿಕೃತ ಶ್ರೀ ರಾಮಾಶ್ವಮೇಧಂ ಕೃತಿಯನ್ನು ಹಲವು ಬಾರಿ ಬೇರೆ ಬೇರೆ ರೀತಿಯಲ್ಲಿ ಹಲವರು ಸಂಪಾದಿಸಿದನ್ನು ಕಾಣಬಹುದು. ಇದರಲ್ಲಿ ಮುದ್ದಣನ ಮೂಲ ಹಸ್ತಪ್ರತಿಯನ್ನೇ ಕಣ್ಣಾರೆ ಕಂಡು ಸಂಪಾದಿಸಿದ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಶಬ್ಧರೂಪ ಕಾಗುಣಿತವನ್ನು ಹಸ್ತಪ್ರತಿಯಲ್ಲಿದ್ದಂತೆಯೇ ಉಳಿಸಿಕೊಳ್ಳುವ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಪ್ರಸ್ತುತ ಗಾಯತ್ರೀ ನಾವಡೆಯವರು ಪ್ರೊ.ಜಿ. ವೆಂಕಟಸುಬ್ಬಯ್ಯನವರು ಸಂಪಾದಿಸಿದ ಸಂಪಾದನೆಯನ್ನು ಆಧಾರವಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಿದ್ದಾರೆ.
©2025 Book Brahma Private Limited.