ಪಂಪನ ಸಮಸ್ತ ಭಾರತ ಕಥಾಮೃತ

Author : ಎಲ್. ಬಸವರಾಜು

Pages 436

₹ 266.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ವಿದ್ವಾಂಸ ಡಾ. ಎಲ್. ಬಸವರಾಜು ಅವರ ಕೃತಿ-ಪಂಪನ ಸಮಸ್ತ ಭಾರತ ಕಥಾಮೃತ. ಕನ್ನಡ ಸಾಹಿತ್ಯದ ನಾಡೋಜ ಎಂದೇ ಖ್ಯಾತಿಯ ಪಂಪನು ಕುಮಾರವ್ಯಾಸ ಮಹಾಭಾರತ ಕೃತಿಯಿಂದ ಪ್ರಸಿದ್ಧ ಪಡೆದ ಹಳಗನ್ನಡ ಕವಿ. ಈತನ ಕಾವ್ಯದ ಸ್ವಾದವನ್ನು ಕನ್ನಡದ ಪ್ರತಿ ಸಾಹಿತ್ಯಾಸಕ್ತನು ಸವಿದಿದ್ದಾನೆ. ಕುಮಾರವ್ಯಾಸ ಮಹಾಭಾರತ ಕೃತಿಯನ್ನು ವಿಶ್ಲೇಷಣೆಗೊಳಪಡಿಸಿ , ಆ ಕೃತಿಯಲ್ಲಿಯ ಸಾಹಿತ್ಯಕ ಗಟ್ಟಿತನವನ್ನು, ಕಾವ್ಯಾತ್ಮಕ ಗುಣವನ್ನು ಕನ್ನಡಿಗರಿಗೆ ತೋರಿದ್ದು ಈ ಕೃತಿಯ ಹೆಗ್ಗಳಿಕೆ.

About the Author

ಎಲ್. ಬಸವರಾಜು
(07 October 1919 - 29 January 2012)

ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ 1919ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಲಿಂಗಪ್ಪ- ತಾಯಿ ಈರಮ್ಮ. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು. ದಾವಣಗೆರೆ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಕೆಲಕಾಲಾನಂತರ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು, ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಅನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ...

READ MORE

Related Books